ನ್ಯಾಮತಿ:ಮಾದಿಗ ಸಮದಾಯ ಒಳಮೀಸಲಾತಿಗಾಗಿ ಮೂರುದಶಕದಿಂದ ನಿರಂತರ ಹೋರಾಟ ಮಾಡುತ್ತಿದ್ದು.ಒಳಮೀಸಲಾತಿ ಜಾರಿಗೆತರಲು ಮತ್ತೆ ಹೊಸದಾಗಿಆಯೋಗರಚನೆ ಮಾಡಲು ಹೊರಟಿರುವ ಸರ್ಕಾರದಕ್ರಮವನ್ನು ವಿರೋಧಿಸುವುದಾಗಿ ನ್ಯಾಮತಿತಾಲ್ಲೂಕು ಪರಿಶಿಷ್ಟ ಜಾತಿ ಒಳ ಮೀಸಲಾತಿ ಹೋರಾಟ ಸಮತಿಯ ಪದಾಧಿಕಾರಿಗಳು ಘೋಷಣೆ ಮಾಡಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾದಿಗ ಸಮುದಾಯದ ಮುಖಂಡಕೆಂಚಿಕೊಪ್ಪ ಮಂಜಪ್ಪ ಮಾತನಾಡಿ, ಆಗಸ್ಟ್ 1ರಂದು ಸುಪ್ರೀಂಕೊರ್ಟತೀರ್ಪು ನೀಡಿ ಒಳಮೀಸಲಾತಿ ಜಾರಿಗೆರಾಜ್ಯ ಸರ್ಕಾರಕ್ಕೆ ಅವಕಾಶ ಇದೆಎಂದು ಹೇಳಿದ್ದರೂ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಬೇಡಿಕೆಯನ್ನು ನಿರ್ಲಕ್ಷಿಸುತ್ತಾ ಬಂದು ಈಗ ಉಪಚುನಾವಣೆಯ ನೆಪದಲ್ಲಿ ಹೊಸದಾಗಿಆಯೋಗರಚನೆಗೆ ಹೊರಟಿರುವುದು ಸಮಂಜಸವಲ್ಲಎಂದರು.
ಸಚಿವರಾದ ಮಹಾದೇವಪ್ಪ ಮತ್ತುಪ್ರಯಾಂಕಖರ್ಗೆಅವರ ತಾಳಕ್ಕೆ ತಕ್ಕಂತೆಕುಣಿಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಮಾದಿಗ ಸಮುದಾಯಕ್ಕೆಅನ್ಯಾಯ ಮಾಡಲು ಹೊರಟಿದ್ದಾರೆ.ಇವರಿಗೆಉಪಚುನಾವಣೆಯಲ್ಲಿ ಸಮುದಾಯದವರು ಸೋಲಿಸಿ ಸರಿಯಾದ ಪಾಠ ಕಲಿಸಲಿದ್ದಾರೆಎಂದರು.
ಒಳಮೀಸಲಾತಿ ಜಾರಿಗೆ ಹೊಸ ಆಯೋಗ ಮಾಡುವುದನ್ನು ಸಮುದಾಯದವರು ವಿರೋಧ ವ್ಯಕ್ತಪಡಿಸುತ್ತೇವೆಎಂದು ಹೋರಾಟ ಸಮತಿಯ ಮುಖಂಡರಾದರವಿಕುಮಾರ ಮಲ್ಲಿಗೇನಹಳ್ಳಿ, ನರಸಿಂಹಪ್ಪ ಗೋವಿನಕೋವಿ, ಸುರೇಶ ನ್ಯಾಮತಿ, ಸಂತೋಷ ಸೋಗಿಲು, ಕುಮಾರಜೋಗ, ರಮೇಶಕೋಟೆಮಲ್ಲೂರು, ಗುಡದಯ್ಯ ದೊಡ್ಡೆತ್ತಿನಹಳ್ಳಿ, ಸೋಮಶೇಖರ ಮತ್ತು ಎ.ಕೆ. ಕುಮಾರಚೀಲೂರು, ಮಂಜು ಮರಿಗೊಂಡನಹಳ್ಳಿ, ರುದ್ರೇಶ ಕುಂಕುವ ಪ್ರವೀಣ ಯರಗನಾಳ್ ತಿಳಿಸಿದರು.

Leave a Reply

Your email address will not be published. Required fields are marked *