ಬುಧವಾರ ನ್ಯಾಮತಿ ಪೊಲೀಸ್‍ಠಾಣೆಯಲ್ಲಿ ಮಾತನಾಡಿ, ಈಗಾಗಲೆ ಪ್ರಕರಣದಾಖಲಾಗಿದೆ. ಚನ್ನಗಿರಿ ವಿಭಾಗದಎಎಸ್‍ಪಿ ಶ್ಯಾಮ್ ವರ್ಗಿಸ್ ನೇತೃತ್ವದಲ್ಲಿ ಪೊಲೀಸ್‍ಇನ್ಸ್‍ಪೆಕ್ಟರ್ ಒಳಗೊಂಡಂತೆ 5 ತಂಡಗಳಲ್ಲಿ ತನಿಖೆಕೈಗೊಂಡುಕಾರ್ಯ ಪ್ರವೃತ್ತರಾಗಿದ್ದಾರೆ.ಯಾವುದೇ ಕಳ್ಳರನ್ನು ಬಂಧಿಸಿರುವುದಿಲ್ಲ ಎಂದರು.
ಬ್ಯಾಂಕ್ ಭದ್ರತೆ ವ್ಯವಸ್ಥೆಯಲ್ಲಿ ಲೋಪದಿಂದಕೂಡಿದ್ದು, ಕಳವು ಪತ್ತೆಗೆ ಸಾಕ್ಷ್ಯಾಧಾರಗಳ ಕೊರತೆಇದೆ.ಆದರೂ ಸಹಾ ಎಲ್ಲಾರೀತಿಯಿಂದಲೂ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಕೆಲಸ ತನಿಖಾತಂಡಕೈಗೊಂಡಿದೆ. ಕಳವು ಪ್ರಕರಣವನ್ನುಆದಷ್ಟು ಬೇಗನೆ ಬೇಧಿಸುತ್ತೇವೆ, ಕಾಲವಾಕಾಶ ಬೇಕಾಗುತ್ತದೆ ಸಾರ್ವಜನಿಕರುಯಾವುದೇರೀತಿಯಆತಂಕ ಪಡದೆ ಸಹನೆ ಇರುವಂತೆ ಮನವಿ ಮಾಡಿದರು.
ಬ್ಯಾಂಕಿನವರುಎಲ್ಲಾರೀತಿಯ ಭದ್ರತಾ ವ್ಯವಸ್ಥೆ ಸರಿಪಡಿಸಿಕೊಂಡು, ಮುಂದಿನ ವಾರ ವಹಿವಾಟುಆರಂಭ ಮಾಡುವಂತೆ ಸೂಚಿಸಲಾಗಿದೆಎಂದರು.
ಪೂರ್ವ ವಲಯ ಐಜಿಪಿ ರಮೇಶ ಬಾನೋತ್‍ಅವರು ಬುಧವಾರ ನ್ಯಾಮತಿ ಪೊಲೀಸ್‍ಠಾಣೆಗೆ ಭೇಟಿ ನೀಡಿ, ತನಿಖೆಯ ಬಗ್ಗೆ ಮಾಹಿತಿ ಪಡೆದು ಸೂಕ್ತ ಮಾರ್ಗದರ್ಶನ ನೀಡಿದ್ದಾರೆಎಂದುಎಸ್‍ಪಿ ಉಮಾ ಪ್ರಶಾಂತ ತಿಳಿಸಿದರು.
ಪೊಲೀಸ್‍ಇನ್ಸ್‍ಪೆಕ್ಟರ್ ನ್ಯಾಮತಿಯಎನ್.ಎಸ್.ರವಿ ಮತ್ತು ಹೊನ್ನಾಳಿಯ ಸುನೀಲ ಕುಮಾರಇದ್ದರು.
ಬಾಕ್ಸ್
ಪಟ್ಟಣದ ಬ್ಯಾಂಕ್ ಕೆಲಸ ಆರಂಭಿಸುವವರೆಗೆ ಸಾರ್ವಜನಿಕರು ಪಟ್ಟಣದ ಮತ್ತು ಸವಳಂಗ ಗ್ರಾಮದಲ್ಲಿರುವಗ್ರಾಹಕರ ಸೇವಾ ಕೇಂದ್ರದಲ್ಲಿ ಹಣಕಾಸಿನ ವಹಿವಾಟು ನಡೆಸಬಹುದುಎಂದು ಬ್ಯಾಂಕ್‍ನ ಹಿರಿಯಅಧಿಕಾರಿ ಮೌಖಿಕವಾಗಿ ತಿಳಿಸಿದರು.