ಜಿಲ್ಲಾ ಪಂಚಾಯಿತಿ, ಎನ್.ಆರ್.ಎಲ್.ಎಂ ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್ ವತಿಯಿಂದ ಅ.30 ರಂದು ನಗರದ ಬಿ.ಎಸ್ ಚನ್ನಬಸಪ್ಪ & ಸನ್ಸ್ ಎಕ್ಸೂಲಿಜಿವ್ ಅಂಗಡಿ, ಡೆಂಟಲ್ ಕಾಲೇಜ್ ರೋಡ್ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಹತ್ತಿರ ಆಯೋಜಿಸಿಲಾಗಿದ್ದ ದೀಪ ಸಂಜೀವಿನಿ ಕಾರ್ಯಕ್ರಮವನ್ನು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿ, ದೀಪಗಳನ್ನು ಖರೀದಿಸಿದರು.
ಬಿ.ಎಸ್.ಚನ್ನಬಸಪ್ಪ ಅಂಗಡಿ ಮಾಲೀಕರಾದ ಬಿ.ಎಸ್ ಶಿವಕುಮಾರ್ ಕಾರ್ಯಕ್ರಮದ ಕುರಿತು ಮಾತಾನಾಡಿದರು.
ಎನ್‍ಆರ್‍ಎಲ್‍ಎಂ ಯೋಜನೆಯ ಸಂಜೀವಿನಿ ಸ್ವಸಹಾಯ ಸಂಘಗಳು ಉತ್ಪಾದಿಸಿದ ಉತ್ಪನ್ನಗಳಾದ ಮಣ್ಣಿನ ದೀಪ ಮತ್ತು ಇತರೆ ಅಲಂಕಾರಿಕ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಯಿತು. 20 ಕ್ಕೂ ಹೆಚ್ಚು ಸಂಜೀವಿನಿ ಸ್ವಸಹಾಯ ಸಂಘಗಳು ಭಾಗವಹಿಸಿ ವಿವಿಧ ಬಗೆಯ ದೀಪಗಳನ್ನು, ಅಲಂಕಾರಿಕ ವಸ್ತುಗಳನ್ನು ಮತ್ತು ಆಹಾರ ಪದಾರ್ಥಗಳನ್ನು ಮಾರಾಟ ಮಾಡಿ, ಸುಮಾರು 1,10,000/-ರೂಗಳವರೆಗೆ ಉತ್ಪನ್ನಗಳನ್ನು ಮಾರಾಟ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಯೋಜನಾ ನಿರ್ದೇಶಕರಾದ ರೇμÁ್ಮ, ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಹಾಗೂ ಎನ್‍ಆರ್‍ಎಲ್‍ಎಂ ಡಿ.ಪಿ.ಎಂ ಭೋಜರಾಜ ಹಾಗೂ ಜಿಲ್ಲಾ, ತಾಲ್ಲೂಕು ಸಿಬ್ಬಂದಿಗಳು ಭಾಗವಹಿಸಿದ್ದರು.