ನ್ಯಾಮತಿ:ನಾಡಿನ ನೆಲ,ಜಲ, ಸಂಸ್ಕøತಿರಕ್ಷಣೆ ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿ ಎಂದು ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ ಹೇಳಿದರು.
ಪಟ್ಟಣz ಅರಳಿಕಟ್ಟೆ ವೃತ್ತದಲ್ಲಿ ಶುಕ್ರವಾರ ನ್ಯಾಮತಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ವಿನಾಯಕ ಕನ್ನಡ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಪಟ್ಟಣ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕೆಪಿಎಸ್ ಶಾಲೆಯ ಪ್ರಾಂಶುಪಾಲ ವಿ.ಪಿ.ಪೂರ್ಣಾನಂದ ಅವರು ಮಾತನಾಡಿ, ಇವತ್ತು ಕನ್ನಡ ಭಾಷೆ ಉಳಿದಿದೆ ಎಂದರೆಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ. ಪೋಷಕರಇಂಗ್ಲೀಷ್ ವ್ಯಾಮೋಹಕ್ಕೆಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ ಎಂದು ವಿಷಾಧಿಸಿದರು.ಎಲ್ಲಾ ಇಲಾಖೆಗಳಲ್ಲೂ ಕನ್ನಡ ಭಾಷೆಯಲ್ಲಿಯೇ ವ್ಯವಹಾರ ನಡೆಯುವಂತಾಗಬೇಕುಎಂದರು.
ವಿನಾಯಕ ಸಂಘದಅಧ್ಯಕ್ಷ ವೀರಣ್ಣಗೌಡ, ಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಗಣೇಶರಾವ್, ಪ್ರಾಂಶುಪಾಲಾರಾದಎಸ್.ಆರ್.ಗಿರಿಜಮ್ಮ, ಬೆಸ್ಕಾಂ ಎಂಜಿನಿಯರ್ ಬಿ.ಕೆ.ಶ್ರೀನಿವಾಸ, ನೌಕರರ ಸಂಘದ ಅಧ್ಯಕ್ಷಎಸ್. ಸಂತೋಷ, ಶಿಕ್ಷಣ ಇಲಾಖೆಯ ಮುದ್ದನಗೌಡ, ಸಹಶಿಕ್ಷಕ ಮಲ್ಲೇಶಪ್ಪ, ಧನಂಜಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ-ಕಾಲೇಜುಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗೃಹರಕ್ಷದ ದಳದ ಘಟಾಕಾಧಿಕಾರಿ ಎಂ.ರಾಘವೇಂದ್ರ ಅವರ ನೇತೃತ್ವದಲ್ಲಿಗೃಹರಕ್ಷಕ ದಳದಿಂದ ಧ್ವಜವಂದನೆ ನಡೆಯಿತು.