ದಾವಣಗೆರೆ ; ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಉನ್ನತ ಸಾಧನೆ ಮಾಡಿದಾಗ ಸಾಧಕರಾಗಿ ಪರಿಪೂರ್ಣ ಹೊಂದಲು ಸಾಧ್ಯ ಎಂದು ಗುರುಕುಲ ಶಾಲೆಯ ಕಾರ್ಯದರ್ಶಿ ಹಾಗೂ ಅಧ್ಯಕ್ಷ ಅಬ್ದುಲ್ ಆರ್. ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಗುರುಕುಲ ವಸತಿಯುತ ಶಾಲೆಯ ಮಕ್ಕಳು ಕ್ರೀಡೆಯಲ್ಲಿ ಸಾಧನೆ ಮಾಡಿರುವುದನ್ನು ಪ್ರಶಂಶಿಸುತ್ತಾ, ಕೇವಲ ಓದಿಗಷ್ಟೇ ಸೀಮಿತವಾದರೆ ಜ್ಞಾನವನ್ನಷ್ಟೇ ಪಡೆಯುವಂತಾಗುತ್ತದೆ. ಕ್ರೀಡೆಯಲ್ಲೂ ತೊಡಗಿಸಿಕೊಂಡು ಅದರಲ್ಲೂ ತಮ್ಮ ಪ್ರತಿಭೆ ತೋರಿ ಸಾಧನೆ ಮಾಡಬೇಕು. ಜ್ಞಾನ ಪಡೆಯುವ ಜೊತೆಗೆ ಕ್ರೀಡೆಯು ಬೇಕು. ಇವೆರಡು ಉಜ್ವಲ ಭವಿಷ್ಯಕ್ಕೆ ದಾರಿ ದೀಪವಾಗಲಿವೆ ಎಂದರು.
ದಾವಣಗೆರೆ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ 2024ರಲ್ಲಿ ಗುರುಕುಲ ವಸತಿಯೋತ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಪ್ರಥಮ ಸ್ಥಾನಗಳೊಂದಿಗೆ ಉಲ್ಲೇಖನೀಯ ಸಾಧನೆ ಮಾಡಿದ್ದಾರೆ.
ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಹಲವಾರು ಪ್ರಥಮ ಸ್ಥಾನಗಳನ್ನು ಪಡೆದು, ಏಳು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಪ್ರಮುಖ ಸಾಧನೆಗಳು:
100 ಮೀಟರ್ ಓಟ: ಪ್ರಥಮ ಮತ್ತು ತೃತೀಯ ಸ್ಥಾನ
200 ಮೀಟರ್ ಓಟ: ಪ್ರಥಮ ಸ್ಥಾನ
400 ಮೀಟರ್ ಓಟ: ಪ್ರಥಮ ಸ್ಥಾನ
600 ಮೀಟರ್ ಓಟ: ಪ್ರಥಮ ಸ್ಥಾನ
4×100 ಮೀಟರ್ ರಿಲೇ: ಪ್ರಥಮ ಸ್ಥಾನ
ಉದ್ದ ಜಿಗಿತ: ಪ್ರಥಮ ಮತ್ತು ತೃತೀಯ ಸ್ಥಾನಗಳು
80 ಮೀಟರ್ ಹರ್ಡಲ್: ದ್ವಿತೀಯ ಸ್ಥಾನ
ಬಾಲಕಿಯರ ವಿಭಾಗದಲ್ಲಿ ಚೇತನ ಚಾಂಪಿಯನ್ ಆಗಿ ಹೊರಹೊಮ್ಮಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಶಿಕ್ಷಕರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.