ನ್ಯಾಮತಿ:ತಾಲೂಕು ಜೀನಹಳ್ಳಿ ಗ್ರಾಮದಲ್ಲಿ ದೀಪಾವಳಿಯ ವರ್ಷದದೊಡಕು ದಿನದ ಅಂಗವಾಗಿ ಮಂಗಳವಾರ ರಾಮದೇವರು ತಿಮ್ಮೇಶ್ವರ, ದೊಡ್ಡಯ್ಯ ,ಕರಿಯಮ್ಮ ದೇವರು, ಮರಿಯಮ್ಮ ದೇವಿ ಈ ಎಲ್ಲಾ ದೇವರ ಮೂರ್ತಿಗಳ ಗ್ರಾಮದ ಅರಳಿಕಟ್ಟಿ ಸ್ಥಳದಲ್ಲಿ ಒಟ್ಟಾಗಿ ಕುಳ್ಳಿರಿಸಿ ಉದ್ಭವಮೂರ್ತಿಗಳಿಗ ಸೇವಂತಿಗೆ, ಮಲ್ಲಿಗೆ, ಚಂಡಿ ಹೂವು ಇನ್ನು ಮುಂತಾದ ಪುಷ್ಪಗಳಿಂದ ಶೃಂಗರಿಸಿ ಅಲಂಕಾರಗಳೂಂದಿಗೆ ಪೂಜೆ ನೆರವೇರಿಸಿದರು. ಪ್ರತಿವರ್ಷದಂತೆ ಈ ವರ್ಷವೂ ಸಹ ವರ್ಷದೊಡಕು ದಿನದಂದು ಬೆಳಗಿನ ಜಾವ ಐದು ಗಂಟೆಗೆ ಅರಳಿಕಟ್ಟೆಯಲ್ಲಿ ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ ದೇವರುಗಳಿಗೆ ಹಣ್ಣು ಕಾಯಿ ಮಾಡಿಸಿ, ಅರಕೆ ಕಟ್ಟಿ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಭಕ್ತಾದಿಗಳು ಬಂದು ಪೂಜೋತ್ಸವ ನೆರವೇರಿಸಿದರು. ನಂತರ ಆಯಾಯ ದೇವರುಗಳು ಪಲ್ಲಕ್ಕಿ ಉತ್ಸವದೊಂದಿಗೆ ಡೊಳ್ಳು ಕುಣಿತ ಬಾಜ ಬಜಂತ್ರಿಯೊಂದಿಗೆ ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ತೆರಳುವ ಸಂದರ್ಭದಲ್ಲಿ ಭಕ್ತರು ತಮ್ಮ ತಮ್ಮ ಮನೆಗಳ ಮುಂದೆ ನೀರನ್ನು ಸಿಂಪಡಿಸಿ, ರಂಗೋಲಿ ಹಾಕಿ, ಹಣ್ಣು ಕಾಯಿ ಮಾಡಿಸಿ ಭಕ್ತಿಗೆ ಪಾತ್ರರಾದರು. ನಂತರ ಆಯಾಯ ದೇವರುಗಳು ಪಲ್ಲಕ್ಕಿ ಉತ್ಸವದೊಂದಿಗೆ ಮೂಲ ಸ್ಥಳಗಳಿಗೆ ಹೋಗಿ ಗದ್ದಿಗೆಗೊಂಡವು . ಗ್ರಾಮದ ಮುಖಂಡರಾದ ನಿವೃತ್ತ ಶಿಕ್ಷಕ ನಾಗೇಂದ್ರಪ್ಪ , ರಮೇಶ್ ಪಟೇಲ್ ಗ್ರಾಮದ ಎಲ್ಲಾ ಸಮುದಾಯದ ಮುಖಂಡರುಗಳು ಭಕ್ತಾದಿಗಳು ಈ ಧರ್ಮದ ಕಾರ್ಯದಲ್ಲಿ ಭಾಗಿಯಾಗಿದ್ದರು.