ನ್ಯಾಮತಿ:ಪ್ರಾಥಮಿಕ ಹಂತದಲ್ಲಿ ಶಾಲೆಗೆ ದಾಖಲಾಗುವ ಮಕ್ಕಳಿಗೆ ಪೂರ್ವ ಸಿದ್ದತೆ ಇರವುದಿಲ್ಲ. ಅಂತಹ ಮಕ್ಕಳಿಗೆ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರುವುದು ಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆಎಂದು ಸಂಪನ್ಮೂಲ ಶಿಕ್ಷಕ ಎಂ.ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರತಿ ತಿಂಗಳ ಎರಡನೇ ಶನಿವಾರ ನಡೆಯುವ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವಿಧ ಮಾತೃಭಾಷೆ ಮಾತನಾಡುವ ಮಕ್ಕಳು ಶಾಲೆಗಳಿಗೆ ದಾಖಲಾಗುತ್ತವೆ ಅಂತಹ ಮಕ್ಕಳನ್ನು ವಿದ್ಯಾ ಪ್ರವೇಶ ಮೂಲಕ, ಮಹಾನ್ ವ್ಯಕ್ತಿಗಳ ಪರಿಚಯ, ಸ್ಥಳೀಯವಾಗಿ ಪರಿಸರದ ಮೂಲ ಕಲ್ಪನೆಯ ಪರಿಚಯ ಮಾಡಿಸುವ ಮೂಲಕ ಮಕ್ಕಳಿಗೆ ಅನುಭವ ಕಲಿಸಬೇಕು. ಪ್ರಸ್ತುತ ದಿನಗಳಲ್ಲಿ ಮಕ್ಕಳ ಶಿಕ್ಷಣ ಮತ್ತು ಮಗುವಿನ ಬಗ್ಗೆ ಕಾಳಜಿ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕಿದೆ ಎಂದರು.
ಪಟ್ಟಣದಲ್ಲಿರುವ ಮನೆತನಗಳ ಹೆಸರುಗಳು ಹೇಗೆ ಬಂದವು, ಹಿಂದಿನ ಮತ್ತು ಇಂದಿನ ಶಿಕ್ಷಣ ಪದ್ದತಿ, ಸಮಾಜದಲ್ಲಿ ಪ್ರತಿಯೊಬ್ಬ ಸಮುದಾಯದವರು ಪ್ರೀತಿ ವಿಶ್ವಾಸಗಳಿಂದ ಹೇಗೆ ಇದ್ದರೂ ಎಂಬುದರ ಬಗ್ಗೆ ಹಿರಿಯ ಕವಿ ಸಂಡೂರು ಮಹೇಶ್ವರಪ್ಪ ತಿಳಿಸಿದರು.
ಹಿಂದಿನ ಸಂಪ್ರದಾಯಸ್ಥ ಕುಟುಂಬಗಳಲ್ಲಿ ಕಟ್ಟುನಿಟ್ಟಿನ ಆಚರಣೆಗಳಿದ್ದರೂ ಕುಟುಂಬದ ಸದಸ್ಯರು ಅನ್ಯೂನ್ಯತೆಯಿಂದ ಇರುತ್ತಿದ್ದರು.ಇಂದಿನ ಪೋಷಕರು ತಮ್ಮ ಮಕ್ಕಳ ಉಡಿಗೆ, ತೊಡಿಗೆ, ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕು. ಕುಟುಂಬಕ್ಕೆಎರಡು ಮಕ್ಕಳಾದರೂ ಇರಬೇಕು ಎಂದು ತಾಲ್ಲೂಕು ಕದಳಿ ಮಹಿಳಾ ಸಂಘದ ಅಧ್ಯಕ್ಷೆ ಅಂಬುಜಾ ಬಿದರಗಡ್ಡೆ ಹೇಳಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು.
ಕಸಾಪ ಗೌರವ ಕಾರ್ಯದರ್ಶಿ ಎಸ್.ಜಿ.ಬಸವರಾಜಪ್ಪ, ಸಂಘಟನಾ ಕಾರ್ಯದರ್ಶಿ ಎಂ.ಎಸ್.ಜಗದೀಶ, ಕುಂಕುವ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದನ್‍ಜಂಗ್ಲಿ, ಬೆಳಗುತ್ತಿ ಹೋಬಳಿ ಘಟಕದ ಅಧ್ಯಕ್ಷಎಂ.ಜಿ.ಕವಿರಾಜ, ನಿವೃತ್ತ ಶಿಕ್ಷಕ ಮಂಜಪ್ಪ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಕೆ.ಬೋಜರಾಜ, ಪ್ರಗತಿಪರ ರೈತರಾದ ನಾಗರಾಜಪ್ಪ, ಷಡಾಕ್ಷರಪ್ಪ, ವರ್ತಕ ಎನ್.ಟಿ.ಸತ್ಯನಾರಾಯಣ,ಯುವ ಕವಿ ಮಂಜುನಾಥ ಇದ್ದರು.

Leave a Reply

Your email address will not be published. Required fields are marked *