ಭಾರತೀಯ ಜನತಾ ಪಕ್ಷದ ನಾಯಕರು ಹಾಗೂ ಬಿಜೆಪಿ ಅಧ್ಯಕ್ಷರು ವಿರೋಧ ಪಕ್ಷದ ನಾಯಕರುಗಳು ಹಾಗೂ ಸಂಸದ ತೇಜಸ್ವಿ ಸೂರ್ಯ ರೈತರ ಹೆಸರನ್ನು ಪ್ರಸ್ತಾಪಿಸಿ ಅನವಶ್ಯಕವಾಗಿ ಸುಳ್ಳು ಅಪಪ್ರಚಾರ ಮಾಡಿ ಕೋಮು ದ್ವೇಷವನ್ನ ಹರಡಿ ಶಾಂತಿ ಕದಡುವ ಪ್ರಯತ್ನ ನಡೆಸುತ್ತಿರುವ ಬಿಜೆಪಿಯ ಕೋಮುವಾದಿಗಳನ್ನು ಕೂಡಲೇ ಕಾನೂನಾತ್ಮಕವಾಗಿ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಪೋಲಿಸ್ ಇಲಾಖೆಯನ್ನು ಆಗ್ರಹ ಪಡಿಸಲಾಯಿತು ,
ಎರಡು ವರ್ಷಗಳ ಹಿಂದೆ ರೈತರು ಸಾಲದ ಬಾಧೆಯಲ್ಲಿ ಆತ್ಮಹತ್ಯೆಗೆ ಶರಣಾದರೆ ಅಂತಹ ರೈತರ ಕುಟುಂಬವನ್ನು ದುರ್ಬಳಕೆ ಮಾಡಿಕೊಂಡು ಅವರ ಹೆಸರಿನಲ್ಲಿ ಟ್ವೀಟ್ ಮಾಡಿ ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಕೂಡಲೇ ಇಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಕೂಡಲೇ ಅವರನ್ನು ಬಂಧಿಸಬೇಕು,
ಬಿಜೆಪಿ ಸರ್ಕಾರದ ಅವಧಿಯಲ್ಲಿ ವಕ್ಫ್ ಬೋರ್ಡ್ ಮೂಲಕ ಅನೇಕ ಪತ್ರಗಳನ್ನ ರವಾನಿಸಲಾಗಿದೆ ಆದರೆ ಈಗ ಆ ಪ್ರಕರಣಗಳನ್ನು ಕೆಣಕಿ ಕಾಂಗ್ರೆಸ್ ಸರ್ಕಾರದ ಮೇಲೆ ಅಪಪ್ರಚಾರ ಮಾಡುತ್ತಿದೆ ಬಿಜೆಪಿ ಪಕ್ಷ,
ಈಗಾಗಲೇ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು ಬಿಜೆಪಿಯವರು ಈ ರೀತಿಯ ಸುಳ್ಳು ಅಪಪ್ರಚಾರಗಳನ್ನ ಮಾಡಿ ರಾಜ್ಯದ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದೆ,
ಮೃತಪಟ್ಟಿರುವ ರೈತರ ಹೆಸರನ್ನ ದುರ್ಬಳಕೆ ಮಾಡಿಕೊಂಡಿರುವ ಬಿಜೆಪಿ ನಾಯಕರು ಕೂಡಲೇ ರಾಜ್ಯದ ಜನರ ಕ್ಷಮೆ ಕೋರಬೇಕು ಕಾನೂನಿನ ಕ್ರಮಕ್ಕೆ ಒಳಗಾಗಬೇಕು ಇಲ್ಲದೆ ಹೋದಲ್ಲಿ ಕೂಡಲೇ ಅವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ರಾಜ್ಯ ಜನತೆಗೆ ತಪ್ಪು ಸಂದೇಶ ರವಾನಿಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲೇಬೇಕು,
ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕೋಮು ಭಾವನೆ ಕೆರಳಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಪ್ರಯತ್ನ ನಡೆಸುತ್ತಿರುವುದು ಈಗ ಅವರ ಸುಳ್ಳು ಹೇಳಿಕೆಗಳು ಹಾಗೂ ಪ್ರತಿಭಟನೆಯಿಂದ ರಾಜ್ಯದ ಜನತೆಗೆ ಬಿಜೆಪಿಯ ನಕಲಿ ಹೋರಾಟದ ನಾಟಕಗಳು ಬಹಿರಂಗವಾಗಿದೆ,
ಮೃತಪಟ್ಟ ರೈತರ ದುರ್ಬಳಕೆ ಮಾಡಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ಅಧ್ಯಕ್ಷ ವಿಜಯೇಂದ್ರರವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟಿಸಿ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು,
ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಮನೋಹರ್ ರವರು, ಮುಖಂಡರುಗಳಾದ ಎ.ಆನಂದ್, ಎಂ.ಎ.ಸಲೀಮ್,ರವಿಕುಮಾರ್, ಪುಟ್ಟರಾಜು, ಪ್ರಕಾಶ್,
ಹೇಮರಾಜು, ಚಂದ್ರಶೇಖರ್, ಉಮೇಶ್,ಕುಶಾಲ್ ಹರುವೆಗೌಡ ರವಿ, ಓಬಳೇಶ್,ಹಾಗೂ ಪ್ರಚಾರ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು