ನ್ಯಾಮತಿ:ಕಾಲೇಜು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕನ್ನಡ ಸಾಹಿತ್ಯ ಪುಸ್ತಕಗಳನ್ನು ಓದುವಅಭಿರುಚಿ ಬೆಳಸಿಕೊಳ್ಳಬೇಕು ಎಂದುಕಾಲೇಜುಅಭಿವೃದ್ದಿ ಸಮಿತಿ ಸದಸ್ಯ ಹೊಸಮನೆ ಮಲ್ಲಿಕಾರ್ಜುನ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿಪ್ರಥಮದರ್ಜೆಕಾಲೇಜಿನಗ್ರಂಥಾಲಯ ಮತ್ತು ಮಾಹಿತಿಕೇಂದ್ರ ವಿಭಾಗದಿಂದ ಸೋಮವಾರಕನ್ನಡರಾಜ್ಯೋತ್ಸವ ಅಂಗವಾಗಿ ಕನ್ನಡ ಸಾಹಿತ್ಯ ಪುಸ್ತಕಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಂಥಪಾಲಕಜಿ.ಆರ್.ರಾಜಶೇಖರ ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳಸುವುದು ಮತ್ತುಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚಿನಅರಿವನ್ನು ಮೂಡಿಸಲು ಪುಸ್ತಕ ಪ್ರದರ್ಶನ ಮತ್ತು ಪರಿಚಯಕಾರ್ಯಕ್ರಮಆಯೋಜಿಸಲಾಗಿದೆಎಂದರು.
ಪ್ರಾಂಶುಪಾಲರಾದ ಟಿ.ಸಿ.ಭಾರತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿದೆಸೆಯಲ್ಲಿಯೇಗ್ರಂಥಾಲಯ ಬಳಕೆಯನ್ನು ಮಾಡಿಕೊಳ್ಳಬೇಕು.ಕನ್ನqದ ನೆಲ,ಜಲ,ಸಂಸ್ಕøತಿರಕ್ಷಣೆ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಿ ಕನ್ನಡದ ಹಿರಿಮೆಯನ್ನು ಮೆರೆಯಬೇಕುಎಂದರು.
ಉಪನ್ಯಾಸಕರಾದಎನ್.ಜ್ಯೋತಿ, ಗಿರೀಶ, ಬಸವರಾಜ, ರೇವಣಸಿದ್ದಪ್ಪ, ಇಮ್ರಾನ್ ತಾಸಿರ್, ರಾಜೇಶ, ಸುರೇಶ,,ಕುಬೇರಪ್ಪ, ಹನುಮಂತಪ್ಪ ಹಾಗೂ ವಿದ್ಯಾರ್ಥಿಗಳು ಪುಸ್ತಕ ಪ್ರದರ್ಶನವನ್ನು ವೀಕ್ಷಿಸಿದರು.