ನ್ಯಾಮತಿ ಕಂದಾಯ ವಸೂಲಿಯಲ್ಲಿ ತಾಲೂಕು ಶೇ 100ರ ಸಾಧನೆ ಮಾಡಿದೆ ಎಂದು ತಾಲೂಕ್ ಪಂಚಾಯಿತಿ ನಿರ್ವಹಣಾಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.
ನ್ಯಾಮತಿ ತಾಲೂಕಿನ 17 ಗ್ರಾಮ ಪಂಚಾಯಿತಿಗಳಿಂದ ಒಂದೇ ದಿನದಲ್ಲಿ 21,39 ,642,52 ರೂಗಳನ್ನು ಕಂದಾಯ ವಸೂಲಿ ಮಾಡಿ ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಮಟ್ಟದ ಪಂಚಾಯಿತಿಯಿಂದ ಜಿಲ್ಲೆಯಲ್ಲಿ ಕಂದಾಯ ವಸಲಿ ಆಂದೋಲನ ಹಮ್ಮಿಕೊಂಡಿದ್ದು ನ್ಯಾಮತಿ ತಾಲೂಕಿನಲ್ಲಿ ಒಂದೇ ದಿನ 20 ಲಕ್ಷ ಕಂದಾಯ ವಸೂಲಿ ಮಾಡಬೇಕೆಂದು ಆದೇಶ ನೀಡಿದ್ದರು. ಆದೇಶದ ಅನ್ವಯ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕಂದಾಯ ವಸೂಲಿ ಮಾಡುವುದರ ಮೂಲಕ ಗುರಿ ತಲುಪಿದ್ದೇವೆ ಇದಕ್ಕೆ ಸಹಕರಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಒಂದೇ ಗ್ರಾಮವಾದ ದೊಡ್ಡೆ ತ್ತಿನಹಳ್ಳಿ ಗ್ರಾಮದಲ್ಲಿ ಒಂದು ದಿನ 152,982ರೂ ಕರಬಸಲಿ ಮಾಡಲಾಯಿತು ಎಂದು ಕುಂಕೋವ ಗ್ರಾಮ ಪಂಚಾಯಿತಿ ಪಿಡಿಒ ಜಯಪ್ಪ ಮತ್ತು ಅಧ್ಯಕ್ಷ ಚಂದನ್ ತಿಳಿಸಿದರು ತಿಳಿಸಿದರು