ನ್ಯಾಮತಿ:
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನ್ಯಾಮತಿ ತಾಲ್ಲೂಕು ಶಾಖೆಯ
ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಶನಿವಾರ
ಚುನಾವಣೆ ನಡೆಯಿತು.
25 ನಿರ್ದೇಶಕರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದೇಶಪ್ಪ ಜಿಗಣಪ್ಪರ ಮತ್ತು
ನಾಗರಾಜ ದೊಂಕತ್ತಿ ನಾಮಪತ್ರ ಸಲ್ಲಿಸಿದ್ದರು. ಖಜಾಂಚಿ ಸ್ಥಾನಕ್ಕೆ
ಸಂತೋಷ ಎಸ್. ಮತ್ತು ಎಸ್.ಎಚ್.ಸುರೇಶ ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ
ಸಿದ್ದೇಶಪ್ಪ ಜಿಗಣಪ್ಪರ 14 ಮತಗಳನ್ನು ಪಡೆದು ಅಧ್ಯಕ್ಷರಾಗಿ
ಆಯ್ಕೆಯಾಗಿದ್ದಾರೆ. ಎಸ್.ಸಂತೋಷ ಅವರು 15 ಮತಗಳನ್ನು ಪಡೆದು
ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ ಹಾಗೂ ರಾಜ್ಯ ಪರಿಷತ್ತು ಸದಸ್ಯ ಸ್ಥಾನಕ್ಕೆ
ಜಿ.ಬಿ.ವಿಜಯಕುಮಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಮತ್ತು
ಎಸ್.ವಿಶ್ವನಾಥ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ ಎಂದು ಚುನಾವಣಾಧಿಕಾರಿ
ಎಸ್.ಆರ್.ಗಿರಿಜಮ್ಮ ಘೋಷಣೆ ಮಾಡಿದರು.ಸಹಾಯಕ ಚುನಾವಣಾಧಿಕಾರಿಯಾಗಿ
ಕೆ.ಎಸ್. ಈಶ್ವರಪ್ಪ ಕರ್ತವ್ಯ ನಿರ್ವಹಿಸಿದರು.
ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಎಚ್.ವಿ.ರಾಘವೇಂದ್ರ, ನಿವೃತ್ತ
ತಹಶೀಲ್ದಾರ್ ನ್ಯಾಮತಿ ನಾಗರಾಜಪ್ಪ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ
ಡಿ.ಎಂ.ಹಾಲಾರಾಧ್ಯ ಹಾಗೂ ನೂತನ ನಿರ್ದೇಶಕರುಗಳು, ಅಭಿಮಾನಿಗಳು
ಇದ್ದರು.