ನ್ಯಾಮತಿ: ತಾಲೂಕು ದೊಡ್ಡೇರಿ ಗ್ರಾಮದಲ್ಲಿರುವ ಜ್ಞಾನ ವಾಹಿನಿ ವಿದ್ಯಾ ಸಂಸ್ಥೆಯಲ್ಲಿ ನ್ಯಾಮತಿ ಮತ್ತು ಹೊನ್ನಾಳಿ ತಾಲೂಕಿನ ಸರ್ಕಾರಿ ಮತ್ತು ಅನುದಾನ, ಅನುದಾನ ರಹಿತ ಪ್ರೌಡ ಶಾಲೆಗಳ ಮುಖ್ಯ ಶಿಕ್ಷಕರಿಗೆ ಹೊಸ ತಂತ್ರಜ್ಞಾನದ ಬಗ್ಗೆ ಒಂದು ದಿನದ ಕಾರ್ಯಗಾರ ಸಭೆ ನಡೆಯಿತು.
ಬೆಂಗಳೂರಿನ ಕ್ಷಿಜ್ಜಲೀ ಯ್ಯಾಪ್ ಎಂಬ ಹೊಸ ತಂತ್ರಜ್ಞಾನದ ಮಾಹಿತಿ ಕೇಂದ್ರದ ಕಾರ್ಯಗಾರವನ್ನು ಶಾಸಕ ಡಿಜಿ ಶಾಂತನಗೌಡ್ರು ಗಿಡಕ್ಕೆ ನೀರು ಉಣಿಸುವುದರ ಮೂಲಕ ಉದ್ಘಾಟಿಸಿ ನಂತರ ಮಾತನಾಡಿದ ಅವರು ಹೊಸ ತಂತ್ರಜ್ಞಾನವಾದ ಕ್ವಿಜ್ ಲೀ ಯಾಪ್ ಬಳಕೆಯ ಬಗ್ಗೆ ಸರ್ಕಾರಿ, ಅನುದಾನ, ಅನುದಾನ ರಹಿತ ಪ್ರೌಢಶಾಲೆಯ ಮುಖ್ಗಖ್ಯೋಪಾಧ್ಯಾಯರುಗಳು, ಎಸ್ ಎಸ್ ಎಲ್ ಸಿ ಓದುತ್ತಿರುವ ವಿದ್ಯಾರ್ಥಿಗಳು, ಸ್ಮಾರ್ಟ್ ಫೋನ್ ಇದ್ದರೆ ಹೊಸ ತಂತ್ರಜ್ಞಾನವನ್ನ ಅವರೇ ತಯಾರಿ ಮಾಡಿಕೊಳ್ಳಬಹುದು. ಶಿಕ್ಷಕರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಶಿಕ್ಷಕರ ಲಾಗಿನ್ ನಲ್ಲಿ ಮಕ್ಕಳ ವಿದ್ಯಾಭ್ಯಾಸದ ಪರಿಶೀಲನೆ ಮಾಡಬಹುದು. ಶಾಲೆಯ ಮುಖ್ಯ ಶಿಕ್ಷಕರು ತಮ್ಮ ಲಾಗಿನ್ ನಲ್ಲಿ ಎಲ್ಲಾ ವಿಷಯಗಳ ಪ್ರಗತಿ ಪರಿಶೀಲಿನ ನಡೆಸಬಹುದು ಎಂದು ಶಾಸಕ ಡಿಜಿ ಶಾಂತನ ಗೌಡ್ರು ಹೇಳಿದರು. ಪ್ರಸಕ್ತ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳು ಸದ್ಬಳಿಕೆ ಮಾಡಿಕೊಳ್ಳಬಹುದು.. ಮುಂದಿನ ವರ್ಷದಿಂದ ಎಂಟು ಮತ್ತು ಒಂಬತ್ತನೇ ತರಗತಿಯ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನವನ್ನ ಬಳಕೆ ಮಾಡಿಕೊಳ್ಳಬಹುದು. ಈ ತಂತ್ರಜ್ಞಾನ ಬಳಕೆಗೆ ಸಂಪೂರ್ಣ ಸಹಕಾರ ಬೆಂಬಲ ಸದಾ ಇರುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಕೆ ನಿಂಗಪ್ಪ ಹೊಸ ತಂತ್ರಜ್ಞಾನಗಳನ್ನು ಕುರಿತು ಮಾತನಾಡಿದ ಅವರು ಕ್ವಿಜ್ ಲೀ ಸಂಸ್ಥೆಯವರು ಶಿಕ್ಷಣ ಕ್ಷೇತ್ರಕ್ಕೆ ಹೊಸ ತಂತ್ರಜ್ಞಾನ ಹೇಳಿದ್ದರ ಫಲವಾಗಿ ಕ್ರಾಂತಿಯಾಗಲಿದೆ ಎಂದು ತಿಳಿಸಿ, ಪ್ರಥಮವಾಗಿ ಖಾಸಗಿ ಸಂಸ್ಥೆ ಜ್ಞಾನ ವಾಹಿನಿ ದೊಡ್ಡೇರಿ ಶಾಲೆಯಲ್ಲಿ ಅಳವಡಿಸಲಾಗಿದೆ ಮುಂದಿನ ದಿನಗಳಲ್ಲಿ ಪ್ರತಿಯೊಂದು ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಮತ್ತು ಎಲ್ಲಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಈ ತಂತ್ರಜ್ಞಾನವನ್ನು ಬಳಸಿಕೊಳ್ಳುಬಹುದು ಎಂದರು. ಈ ಸಂದರ್ಭದಲ್ಲಿ ಶಾಸಕ ಡಿಜಿ ಶಾಂತನಗೌಡ್ರು, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಕೆ ನಿಂಗಪ್ಪ ಹಾಗೂ
ಕ್ವಿಜಲೀ ಸಂಸ್ಥೆಯ ಸಿಇಓ ದೀಪಕ್ ರಾಮಚಂದ್ರ, ಸಿ ಓ ಫೌಂಡರ್ ಉಜ್ವಲ್ ಕುಮಾರ್, ಶ್ರೀಕಾಂತ್, ಪ್ರತೀಕ್, ದೊಡ್ಡೇರಿ ಜ್ಞಾನ ವಾಹಿನಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ್, ಇಸಿಓ ಮುದ್ದನಗೌಡ, ಹನುಮಂತಪ್ಪ ಅವಳಿ ತಾಲೂಕಿನ ಎಲ್ಲಾ ಪ್ರೌಢಶಾಲೆಯ ಮುಖ್ಯೋಪಾಧ್ಯಯರು ಸಂಬಂಧಪಟ್ಟ ಶಿಕ್ಷಣ ಇಲಾಖೆಯವರು ಸಹ ಭಾಗವಹಿಸಿದ್ದರು.