ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಈ ದೇಶದ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರಂತಹ ಉನ್ನತ ಸ್ಥಾನಗಳನ್ನು ಅಲಂಕರಿಸಲು ಅವಕಾಶ ಇದೆ ಎಂದು ಸಂಯೋಜಿತ ಪ್ರಾದೇಶಿಕ ಕೇಂದ್ರ ನಿರ್ದೇಶಕರಾದ ಮೀನಾಕ್ಷಿ ತಿಳಿಸಿದರು.
ಮಂಗಳವಾರ(26) ರಂದು ಸಂಯೋಜಿತ ಪ್ರಾದೇಶಿಕ ಕೇಂದ್ರ, ದಾವಣಗೆರೆ ರಾಷ್ಟ್ರೀಯ ಬೌದ್ಧಿಕ ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಸಂಸ್ಥೆಯಲ್ಲಿ ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ (ದಿವ್ಯಾಂಗಜನ್), ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಸಹಯೋಗದಲ್ಲಿ 75 ನೇ ವರ್ಷದ ಸಂವಿಧಾನದ ದಿನದ ಅಂಗವಾಗಿ ನಮ್ಮ ಸಂವಿಧಾನ, ನಮ್ಮ ಸ್ವಾಭಿಮಾನ ಎಂಬ ವಿಷಯದೊಂದಿಗೆ ಸಂವಿಧಾನದ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದÀರು.
  ಭಾರತೀಯ ಸಂವಿಧಾನದಲ್ಲಿ ಅಂಗವಿಕಲರಿಗೆ ಹಕ್ಕುಗಳನ್ನು ಕಲ್ಪಿಸಲಾಗಿದೆ. ಜಾತಿ, ಮತ, ಧರ್ಮದ ಹೊರತಾಗಿ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಈ ದೇಶದ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರಂತಹ ಉನ್ನತ ಸ್ಥಾನಗಳನ್ನು ತಲುಪಲು ಅವಕಾಶವಿದೆ. ಈ ಕೀರ್ತಿ ನಮ್ಮ ಭಾರತೀಯ ಸಂವಿಧಾನಕ್ಕೆ ಮಾತ್ರ ಸಲ್ಲುತ್ತದೆ. ನಮ್ಮ ಸಂವಿಧಾನದ ಕಾರಣದಿಂದಾಗಿ ಭಾರತವು ವೈವಿಧ್ಯತೆಯಲ್ಲಿ ಏಕತೆ ಇದೆ, ಈ ದೇಶದ ಎಲ್ಲಾ ಜನರನ್ನು ಸಂಪರ್ಕಿಸಲು ಸಾಧ್ಯ ಎಂದರು.
  ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ರೇಖಾ ಜೋಶಿ ಅವರು ಭಾರತೀಯ ಸಂವಿಧಾನದ ಕುರಿತು ಉಪನ್ಯಾಸ ನೀಡಿದರು.
   ಸಂಯೋಜಕರಾದ ವೈ.ಶ್ರೀನಾಥ್, ಸಿಆರ್‍ಸಿ ಸಿಬ್ಬಂದಿ, ವಿದ್ಯಾರ್ಥಿಗಳು, ಅಂಗವಿಕಲರು, ಪಾಲಕರು ಸುಮಾರು 100 ಮಂದಿ ಭಾಗವಹಿಸಿದ್ದರು.,

Leave a Reply

Your email address will not be published. Required fields are marked *