ನ್ಯಾಮತಿ: ಯಾವ ಉದ್ದೇಶಕ್ಕಾಗಿ ಮನುಷ್ಯಜನ್ಮ ಪಡೆದಿದ್ದಾನೆ, ಅದರಲ್ಲಿ ಏನು ಸಾಧನೆ ಮಾಡದೆ ಹೋದರೆ ಭಗವಂತನಿಗೆಅಪಮಾನ ಮಾಡಿದಂತೆ ಎಂದು ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಕುಂಬಾರಬೀದಿಯಲ್ಲಿ ಬುಧವಾರ ಅಮ್ಮನಮರದದೇವಿ 22ನೇ ವರ್ಷದ ವಾರ್ಷಿಕೋತ್ಸವ ಮತ್ತುಕಾರ್ತಿಕೋತ್ಸವ,ssಸಾಮೂಹಿಕವಿವಾಹಧರ್ಮಸಂದೇಶ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಠ-ಮಂದಿರಗಳಿಗೆ ಹೋಗುವ ಭಕ್ತರು ಬರಿಗೈಯಲ್ಲಿ ಹೋಗಿ ಗುರು,ದೇವರದರ್ಶನ ಪಡೆಯಬಾರದು. ಪರಮಾತ್ಮ ಭೂಮಿ, ನೀರು,ಗಾಳಿ, ಆಕಾಶ,ವಾಯುಕೊಡುಗೆಯಾಗಿಕೊಟ್ಟಿದ್ದಾನೆ ಅವುಗಳನ್ನು ಸದ್ವಿನಿಯೋಗ ಪಡಿಸಿಕೊಳ್ಳಬೇಕು. ಗುರುಗಳ ಮಾಗದರ್ಶನದಲ್ಲಿ ಬದುಕನ್ನು ಶುಭ್ರ ನೀರು ಮತ್ತು ಗುಲಾಬಿ ಹೂವಿನಂತೆ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.
ಕುಂಬಾರ ಸಮುದಾಯಕರ ಕುಶಲ ಕಲೆಗಳಲ್ಲಿ ಚಾಣಕ್ಷರು, ಮುಂದಿನ ವಾರ್ಷಿಕೋತ್ಸವ ಸಮಾರಂಭದಲ್ಲಿತಾವು ತಯಾರಿಸಿದ ಕುಂಬಾರಿಕೆ ವಸ್ತುಗಳ ಪ್ರದರ್ಶನ ಮಾಡುವಂತೆ ಸಮಿತಿಯವರಿಗೆ ಸಲಹೆ ನೀಡಿದರು.
ಯಂತ್ರ, ತಂತ್ರಗಳಿಂದ ಮನುಷ್ಯ ಹಣ ಗಳಿಸಬಹುದು, ಆದರೆ ಸುಖ-ಶಾಂತಿ ಸಿಗಬೇಕಾದರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದುಕೋಣಂದೂರುಬೃಹನ್ಮಠದಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಮ್ಮನಮರದ ನೂತನರಥೋತ್ಸವ ನಿರ್ಮಾಣಕೈಗೊಂಡರೆತಮ್ಮತಂದೆತಾಯಿ ಹೆಸರಿನಲ್ಲಿರೂ 25 ಸಾವಿರದೇಣಿಗೆ ನೀಡುವುದಾಗಿ ವಾಣಿಜ್ಯೋದ್ಯಮಿ ನುಚ್ಚಿನ ವಾಗೀಶ ತಿಳಿಸಿದರು.
ಮಲೆಬೆನ್ನೂರು ವೀರಭದ್ರೇಶ್ವರಚಾರೀಟೆಬಲ್ ಟ್ರಸ್ಟ್‍ನ ವ್ಯವಸ್ಥಾಪಕ ಬಿ.ಚಿದಾನಂದಪ್ಪ, ವೀರಶೈವ ಸಮುದಾಯದತಾಲ್ಲೂಕುಘಟಕದಅಧ್ಯಕ್ಷ ಹವಳದ ಲಿಂಗರಾಜ ಮಾತನಾಡಿದರು.
ಕೋಹಳ್ಳಿ ವಿಶ್ವರಾಧ್ಯರುಎಲ್ಲಾಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಸೇವಾ ಟ್ರಸ್ಟ್‍ಅಧ್ಯಕ್ಷ ಶಂಕರಪ್ಪ ಹೊಸಮನೆ ಅಧ್ಯಕ್ಷತೆ ವಹಿಸಿದ್ದರು.
ದಾವಣಗೆರೆತಿಪ್ಪೇಶಪ್ಪ, ಕರಿಬಸಪ್ಪ, ಮಲೆಬೆನ್ನೂರುಖೇಣಿ ಬಸವರಾಜಪ್ಪ, ಖೇಣಿ ಮಹಾರುದ್ರ, ಗಂಗಾಧರ ಹಾಗೂ ವಿವಿಧ ಕಲಾ ತಂಡಗಳನ್ನು ಗೌರವಿಸಲಾಯಿತು.
ಸೇವಾ ಟ್ರಸ್ಟ್‍ನ ಪದಾಧಿಕಾರಿಗಳಾದ ಎಚ್.ಕೆ.ಚನ್ನೇಶಪ್ಪ, ಎಚ್.ಮಲ್ಲಿಕಾರ್ಜುನ, ಎನ್.ಎಂ.ಮಲ್ಲೇಶ, ಪುಟ್ಟಪ್ಪ ಶಿಕ್ಷಕರು, ಎಂ.ಕರಿಬಸವ, ಸಿಂಧೂ, ದೇವಿಕಾಕಾರ್ಯಕ್ರಮ ನಡೆಸಿಕೊಟ್ಟರು.
ನಂತರ ಸಾಮೂಹಿಕ ಅನ್ನಸಂತರ್ಪಣ ನಡೆಯಿತು.

Leave a Reply

Your email address will not be published. Required fields are marked *