ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ,  ಕರ್ನಾಟಕ  ನಶಾ ಮುಕ್ತ ಭಾರತ ಅಭಿಯಾನ ಇವರ ಸಂಯುಕ್ತಾಶ್ರಯದಲ್ಲಿ  ದೊಡ್ಡಬಾತಿ ತಪೋವನ ಕೇಂದ್ರ ಕಚೇರಿಯಲ್ಲಿ ಶಾಲಾ ಶಿಕ್ಷಕರಿಗೆ ಮಾದಕ ವಸ್ತುವಿನ ನಿಯಂತ್ರಣ ಕುರಿತು ಒಂದು ದಿನದ ಜಾಗೃತಿ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
   ಕಾರ್ಯಕ್ರಮವನ್ನು ತಪೋವನ ಅಯುರ್ವೇದಿಕ್ ಮತ್ತು ನ್ಯಾಚುರೊಪತಿ ಕಾಲೇಜ್ ಮತ್ತು ಆಸ್ಪತ್ರೆಯ ಪ್ರಿನ್ಸಿಪಾಲರಾದ ಡಾ.ಅಶ್ವಿನಿ ಉದ್ಘಾಟನೆ ಮಾಡಿದರು.
  ರಾಜ್ಯ ಮಟ್ಟದ ಎಸ್.ಎಲ್.ಸಿ.ಎ ಸಂಯೋಜಕರಾದ ಶೈಲಾಶ್ರೀ ಮಾದಕ ವಸ್ತುಗಳ ಅಪಾಯ ಮತ್ತು ನಿಯಂತ್ರಣ ಕುರಿತು ಮಾಹಿತಿ ನೀಡಿದರು.
  ಶಿಕ್ಷಣ ಇಲಾಖೆಯ  ಶಿಕ್ಷಕರ ವಿಜಯ ಕುಮಾರ್ ಮತ್ತು ಮಹಮ್ಮದ್ ಹುಸೇನ್ ಪೀರ್ ರವರು ಪ್ರತಿಜ್ಞಾ ವಿಧಿ ಬೋದಿಸಿದರು.
  ಕಾರ್ಯಾಕ್ರಮದಲ್ಲಿ ವಿದ್ಯಾರ್ಥಿಗಳಿಂದ ಮಾದಕ ವಸ್ತುಗಳ ವಿರೋಧದ ಕುರಿತು ಕಿರು-ನಾಟಕ ಪ್ರದರ್ಶನ ಮಾಡಿದರು. ಭಾಗವಹಿಸಿದವರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು,
   ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ಶಿಲ್ಪಾ ಮತ್ತು ಡಾ.ಅನಿತಾ , ಜಗದೀಶ್,  ದಾವಣಗೆರೆ ಜಿಲ್ಲೆಯ 100 ಕ್ಕೂ ಅಧಿಕ ಶಾಲಾ ಶಿಕ್ಷಕರು ಹಾಗೂ ಎಸ್.ಎಲ್.ಸಿ.ಎ ಸಿಬ್ಬಂದಿಗಳು ಹಾಗೂ ಇನ್ನಿತರರು ಬಾಗವಹಿಸಿದ್ದರು.

Leave a Reply

Your email address will not be published. Required fields are marked *