ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಂಗ ಸಂಸ್ಥೆಗಳಾದ ಬಾಲಕರ ಸರ್ಕಾರಿ ಬಾಲ ಮಂದಿರ, ಬಾಲಕಿಯರ ಸರ್ಕಾರಿ ಬಾಲ ಮಂದಿರ ಹಾಗೂ ಅನುದಾನ ಸಹಿತ, ರಹಿತ, ಸರ್ಕಾರಿ, ಖಾಸಗಿ ಮಕ್ಕಳ ಪಾಲನಾ ಕೇಂದ್ರಗಳಲ್ಲಿ ದೀರ್ಘಕಾಲಗಳಿಂದ ಪೋಷಕರ, ಕುಟುಂಬದ ಹಾರೈಕೆಯಿಂದ ವಂಚನೆಗೆ ಒಳಗಾದ 6 ರಿಂದ 18 ವರ್ಷದ ಒಳಗಿನ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ತಾತ್ಕಾಲಿಕವಾದ, ಶಾಶ್ವತವಾದ ಪರ್ಯಾಯ ಕೌಟುಂಬಿಕ ವ್ಯವಸ್ಥೆಯನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಸದೃಢವಾಗಿರುವ ಕುಟುಂಬದ ಪೋಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಬಾಲ ಭವನ ಕಟ್ಟಡ ಜಿ.ಹೆಚ್ ಪಟೇಲ್ ಬಡಾವಣೆ, ನಾಗನೂರ ರಸ್ತೆ, ದಾವಣಗೆರೆ ದೂ ಸಂ: 08192-222701 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.