ಆರೈಕೆದಾರರು ಮತ್ತು ವಿದ್ಯಾರ್ಥಿಗಳು  ದಿವ್ಯಾಂಗರ ಅಭಿವೃದ್ದಿ ಮತ್ತು ಭವಿಷ್ಯಕ್ಕಾಗಿ ಅವರ ನಾಯಕತ್ವ ಹೆಚ್ಚಿಸಬೇಕೆಂದು ಸಿಆರ್‍ಸಿ ನಿರ್ದೇಶಕರಾದ ಮೀನಾಕ್ಷಿ ತಿಳಿಸಿದರು.
 ಮಂಗಳವಾರ (ಡಿ.3) ರಂದು ಸಿಆರ್‍ಸಿ ಕಚೇರಿಯಲ್ಲಿ  ವಿಕಲಚೇತನರು, ಪೆÇೀಷಕರಿಗಾಗಿ ವಿವಿಧ ಕಾರ್ಯಕ್ರಮಗಳು ಸ್ಪರ್ಧೆಗಳನ್ನು ನಡೆಸುವ ಮೂಲಕ ಅಂತರರಾಷ್ಟ್ರೀಯ ದಿವ್ಯಾಂಗರ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.
   30-ದಿವ್ಯಾಂಗ ವ್ಯಕ್ತಿಗಳಿಗೆ 57-ಸಹಾಯಕ ಸಾಧನಗಳನ್ನು ಸಿಆರ್‍ಸಿ ಪಿಎಂಡಿಕೆ, ಎಡಿಐಪಿ, ಆರ್‍ವಿವೈ ಯೋಜನೆಗಳ ಮೂಲಕ ವಿತರಿಸಲಾಯಿತು. ದಿವ್ಯಾಂಗ ಮಕ್ಕಳ ಪೆÇೀಷಕರು ಮತ್ತು ದಿವ್ಯಾಂಗ ವಿದ್ಯಾರ್ಥಿಯು ದಾವಣಗೆರೆಯ ಸಿಆರ್‍ಸಿ ಯ ಆರಂಭಿಕ ಮಧ್ಯಸ್ಥಿಕೆ ಸೇವೆಗಳು, ಕೌಶಲ್ಯ ಅಭಿವೃದ್ಧಿ ವೃತ್ತಿಪರ ತರಬೇತಿ ಸೇವೆಗಳು ಮತ್ತು ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೋರ್ಸ್‍ಗೆ ಸಂಬಂಧಿಸಿದಂತೆ ಪಿಡಬ್ಲ್ಯೂಡಿ ಗಳ ಪುನರ್ವಸತಿ ಮತ್ತು ಸಬಲೀಕರಣಕ್ಕಾಗಿ ದಾವಣಗೆರ ಸಿಆರ್‍ಸಿ ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು.
  17-ವಿಕಲಚೇತನರು ಆರೈಕೆದಾರರು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 21-ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 16-ವಿದ್ಯಾರ್ಥಿಗಳು, ಹಾರೈಕೆದಾರರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದರು. 1-ಗಾಯನ, 4-ನೃತ್ಯಗಳು, 7-ಅಲಂಕಾರಿಕ ಉಡುಪುಗಳು ಸೇರಿದಂತೆ ಸಾಂಸ್ಕøತಿಕ ಸ್ಪರ್ಧೆಗಳನ್ನು ಇ.ತಾಮರೈಸೆಲ್ವನ್, ರಾಜು ಟಿ, ಮಾರುತಿ ಕೃಷ್ಣ ಗೌಡ ಮತ್ತು ಸುರೇಂದ್ರಬಾಬು ರವರುಗಳು ನಡೆಸಿಕೊಟ್ಟರು.   ಈ ದಿನದ ಸ್ಪರ್ಧೆಯಲ್ಲಿ 110 ವಿಕಲಚೇತನರು ಹಾರೈಕೆದಾರರು ಭಾಗವಹಿಸಿದ್ದಾರೆ.
  ಸಿಜಿ ಆಸ್ಪತ್ರೆಯ ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್‍ನ ನರರೋಗ ತಜ್ಞ ಡಾ.ವೀರಣ್ಣ ಗಡದ್, ಕಬಿ-ಸಿಜಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಂಧ್ಯಾ ಅವರು ಅಂಗವೈಕಲ್ಯಕ್ಕೆ ಕಾರಣವಾಗುವ ಸಾಮಾನ್ಯ ನರವೈಜ್ಞಾನಿಕ ಕಾಯಿಲೆಗಳ ಕುರಿತು ಮಾತನಾಡಿದರು. ಸಾಮಾನ್ಯ ಅಸ್ವಸ್ಥತೆಗಳನ್ನು ತಡೆಗಟ್ಟುವ ವಿಧಾನಗಳು ಎಪಿಲೆಪ್ಪಿ, ಸ್ಟ್ರೋಕ್, ಬುದ್ಧಿಮಾಂದ್ಯತೆ, ಲಭ್ಯವಿರುವ ಚಿಕಿತ್ಸಾ ಆಯ್ಕೆಗಳು ಮತ್ತು ಪುನರ್ವಸತಿ ಸೇವೆಗಳ ಕುರಿತು ತಿಳಿಸಿದರು.
  ವೈದ್ಯಾಧಿಕಾರಿ ಡಾ.ರಕ್ಷಿತಾ, ಸುದರ್ಶನ್- ಕಭಿ- ಫಿಸಿಯೋಥೆರಪಿಸ್ಟ್, ಸ್ಫೂರ್ತಿ, ಕಭಿ-ಮನಶಾಸ್ತ್ರಜ್ಞ, ಸುನೀಲ್ ಕಭಿ-ಜಿಲ್ಲಾ ಸಂಯೋಜಕರು , ಕನಗಸಭಾಪತಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *