ಹೊನ್ನಾಳಿ,19: ನ್ಯಾಮತಿ ತಾಲೂಕಿನ ಕುಂಕವ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಕವಿತಾ ಜಗದೀಶ್,ಉಪಾಧ್ಯಕ್ಷರಾಗಿ ಚಂದ್ರಮ್ಮ ಬಸವಣ್ಯಪ್ಪ ಆವಿರೋದವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕಣ್ಣವಪ್ಪ ತಿಳಿಸಿದರು.
ಕುಂಕವ ಗ್ರಾಮ ಪಂಚಾಯ್ತಿ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆ ನಡೆದು ಈ ಹಿಂದೆ ಅಧ್ಯಕ್ಷರಾಗಿದ್ದ ಚಂದನ್ ಹಾಗೂ ಉಪಾಧ್ಯಕ್ಷರಾಗಿದ್ದ ಶೃತಿ ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು.ಅಧ್ಯಕ್ಷ ಸ್ಥಾನಕ್ಕೆ ಕವಿತಾ ಜಗದೀಶ್,ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಮ್ಮ ಬಸವಣ್ಯಪ್ಪ ತಲ ಒಂದು ನಾಮ ಪತ್ರ ಸಲ್ಲಿಸಿ ಬೇರೆಯಾರು ನಾಮ ಪತ್ರ ಸಲ್ಲಿಸದ ಕಾರಣ ಅಧ್ಯಕ್ಷರಾಗಿ ಕವಿತಾ ಜಗದೀಶ್,ಉಪಾಧ್ಯಕ್ಷರಾಗಿ ಚಂದ್ರಮ್ಮ ಬಸವಣ್ಯಪ್ಪ ಅವರುಗಳು ಆವಿರೋದವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕಣ್ಣವಪ್ಪ ಆಯ್ಕೆಯನ್ನು ಘೋಷಣೆ ಮಾಡಿದರು.
ತಾಲೂಕಿನ ಕುಂಕವ ಗ್ರಾಮ ಪಂಚಾಯ್ತಿ ಒಟ್ಟ ಹತ್ತು ಸದಸ್ಯ ಬಲ ಹೊಂದಿದ್ದು ಅದರಲ್ಲಿ 8 ಸದಸ್ಯರು ಚುನಾವಣೆ ಪ್ರಕ್ರೀಯೆಯಲ್ಲಿ ಭಾಗವಾಯಿಸಿದ್ದರು.ಈ ಸಂಧರ್ಭದಲ್ಲಿ ಕೆ.ಟಿ.ಬಸವರಾಜು(ಬಾಬು)ಮಂಜುನಾಥ್,ತಿಮ್ಮಮ್ಮ,ಚಂದ್ರಮ್ಮ,ಚಂದನ್,ಶೃತಿಹನುಮಂತಪ್ಪ, ಭಾಗವಯಿಸಿದ್ದರು,ನೂತನ ಅದ್ಯಕ್ಷ ಉಪಾಧ್ಯಕ್ಷರಾನ್ನು ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್,ಮಾಜಿ ಎಪಿಎಂಸಿ ಉಪಾಧ್ಯಕ್ಷ ಟಿ.ಪಿ.ಹನುಮಂತಪ್ಪ,ರುದ್ರೇಶ್,ಗ್ರಾಪಂ ಪಿಡಿಒ ಜಯಪ್ಪ,ಕಾರ್ಯದರ್ಶಿ ಶಾಂತಕುಮಾರ್ ಗ್ರಾಪಂ ಸಿಂಬದ್ದಿಗಳು ಇದ್ದರು.