?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ದಿಡಗೂರು ಗ್ರಾಮದ ಗೋಮಾಳ ಸರ್ವೇ ಮಾಡಬೇಕು, ಒತ್ತುವರಿ ತೆರವುಗೊಳಿಸಬೇಕು
ದಿಡಗೂರು ಗ್ರಾಮವನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಹಾಗೂ ದನಕರುಗಳೊಂದಿಗೆ ಬೃಹತ್ ಪ್ರತಿಭಟನೆ

ಹೊನ್ನಾಳಿ,19: ತಾಲೂಕಿನ ದಿಡಗೂರು ಗ್ರಾಮದ ಗೋಮಾಳ ಒತ್ತುವರಿಯಾಗಿದ್ದು, ಕೂಡಲೇ ಅದನ್ನು ಸರ್ವೇ ಮಾಡಬೇಕು, ಒತ್ತುವರಿ ಮಾಡಿಕೊಂಡಿರುವವರಿಂದ ಗೋಮಾಳವನ್ನು ಕೂಡಲೇ ತೆರವುಗೊಳಿಸಬೇಕು, ತುಂಗಭದ್ರಾ ನದಿನೀರು ತುಂಬಿ ಬಂದರೆ ಗ್ರಾಮ ಮುಳುಗಡೆಯಾಗುವ ಆತಂಕವಿದ್ದು, ಗ್ರಾಮದ ಎಲ್ಲಾ ನಿವಾಸಿಗಳನ್ನು ಗೋಮಾಳಕ್ಕೆ ಸ್ಥಳಾಂತರಿಸಬೇಕು (ಶಿಫ್ಟಿಂಗ್ ವಿಲೇಜ್ ) ಮಾಡಬೇಕು ಎಂದು ಆಗ್ರಹಿಸಿ ದಿಡಗೂರು ಗ್ರಾಮಸ್ಥರು, ತಮ್ಮ ದನಕರುಗಳನ್ನು ಬೀದಿಗೆ ತಂದು ಬೃಹತ್ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಗ್ರಾಮದ ಮುಖಂಡರಾದ ಗಿಡ್ಡ ಹನುಮಂತಪ್ಪ, ಗುಡ್ಡಪ್ಪ, ಶಿವಮೂರ್ತಿ, ದಿಡಗೂರು ತಮ್ಮಣ್ಣ, ಮಾರಿಕೊಪ್ಪ ಮಂಜಪ್ಪ ಸೇರಿದಂತೆ ಅನೇಕ ಮುಖಂಡರು ಸಾವಿರಾರು ದನಕರುಗಳನ್ನು ಹೊಡೆದುಕೊಂಡು ಹೊನ್ನಾಳಿಗೆ ಹೊರಟಿದ್ದವರನ್ನು ಪೊಲೀಸರು ತಡೆದು ಹೊನ್ನಾಳಿಗೆ ಹೋಗದಂತೆ ಮನವೊಲಿಸಿದರು. ತಮ್ಮ ಅಹವಾಲು ಆಲಿಸಲು ತಹಶೀಲ್ದಾರ್ ಅವರು ಕರೆಸಲಾಗುವುದು ಎಂದು ಸಮಾಧಾನಪಡಿಸಿದರು. ಇದಕ್ಕೆ ಸ್ಪಂದಿಸಿದ ಗ್ರಾಮಸ್ಥರು ದನಕರುಗಳನ್ನು ಮುಖ್ಯರಸ್ತೆಯಲ್ಲಿ ಕಟ್ಟಿಹಾಕಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪಟ್ಟರಾಜಗೌಡ ಅವರು, ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದರು. ಈ ಸಂದರ್ಭದಲ್ಲಿ ದಲಿತ ಮುಖಂಡ ದಿಡಗೂರು ತಮ್ಮಣ್ಣ ಮಾತನಾಡಿ, ದಿಡಗೂರು ಗ್ರಾಮದ ಸರ್ಕಾರಿ ಗೋಮಾಳ ಸರ್ವೇ ನಂಬರ್ 10, 16, 17, 19, 20, 22 ರಲ್ಲಿ ಸುಮಾರು 90 ಎಕರೆ ಗೋಮಾಳವಿತ್ತು, ಆದರೀಗ ಫಲಾನುಭವಿಗಳಿಗೆ ಮಂಜೂರಾಗಿ ಅಂದಾಜು 30 ಎಕರೆ ಮಾತ್ರ ಉಳಿದಿರುವ ಶಂಕೆ ಇದೆ ಎಂದರು. ಈ ಗೋಮಾಳ ಬಿಟ್ಟರೆ ಯಾವುದೇ ಸರ್ಕಾರಿ ಭೂಮಿ ಇಲ್ಲ, ಆದ್ದರಿಂದ ಜಾನುವಾರುಗಳಿಗೆ ಮೇಯಲು ಗೋಮಾಳ ಬೇಕು, ಆದರೆ ಈ 30 ಎಕರೆಯಲ್ಲೂ ಕೆಲವರು ಜಮೀನು ಕೋರಿ ಅರ್ಜಿ ಹಾಕಿಕೊಂಡಿದ್ದಾರೆ ಎಂದು ದೂರಿದರು. ಮಂಜೂರು ಮಾಡಿಸಿಕೊಂಡಿರುವ ಫಲಾನುಭವಿಗಳು ಹೆಚ್ಚುವರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದರು.
ಗ್ರಾಮದ ಮುಖಂಡ ಗಿಡ್ಡ ಹನುಮಂತಪ್ಪ, ಗುಡ್ಡಪ್ಪ, ಶಿವಮೂರ್ತಿ, ಮಾರಿಕೊಪ್ಪ ಮಂಜಪ್ಪ ಅವರು ಮಾತನಾಡಿ, ಒತ್ತುವರಿಯಾಗಿರುವ ಜಮೀನನ್ನು ಕೂಡಲೇ ಸರ್ವೇ ಮಾಡಿ ಒತ್ತುವರಿದಾರರನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಅದೇ ರೀತಿ ತುಂಗಭದ್ರಾ ನದಿತುಂಬಿ ಬಂದರೆ ನೀರು ಗ್ರಾಮಕ್ಕೆ ನುಗ್ಗಿ ಬರುತ್ತದೆ. ಆಗ ಗ್ರಾಮ ನಡುಗಡ್ಡೆಯಾಗಿ ಮಾರ್ಪಡುತ್ತದೆ. ಇದರಿಂದ ಮನೆಗಳ ಸುತ್ತಮುತ್ತ ನೀರು ನಿಂತು ಶಿಥಿಲಾವಸ್ಥೆಗೆ ತಲುಪಿವೆ. ವಾಸದ ದೃಷ್ಠಿಯಿಂದ ಈ ಗ್ರಾಮ ಸುರಕ್ಷಿತವಲ್ಲ, ಆದ್ದರಿಂದ ಇಡೀ ಗ್ರಾಮದ ನಿವಾಸಿಗಳನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ್ ಪಟ್ಟರಾಜಗೌಡ ಅವರು ಮಾತನಾಡಿ, ಎಲ್ಲಾ ಸರ್ಕಾರಿ ಸವೇ ನಂಬರ್‍ನಲ್ಲಿರುವ ಜಮೀನನ್ನು ಅಳತೆ ಮಾಡಿ, ಅಕ್ರಮ ಒತ್ತುವರಿ ವಿಸ್ತೀರ್ಣವನ್ನು ಗುರುತಿಸುವ ಕಾರ್ಯವನ್ನು 20 ದಿನಗಳಲ್ಲಿ ಮಾಡಲಾಗುವುದು. ಅನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಿಪಿಐ ಸುನೀಲ್‍ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು. ಗ್ರಾಮಸ್ಥರಾದ ಮಾಜಿ ಸೈನಿಕ ಹನುಮಂತಪ್ಪ, ಕಾಂತರಾಜ್, ಗೋಪಾಲಪ್ಪ, ದಿಡಗೂರು ಫಾಲಾಕ್ಷಪ್ಪ, ವೆಂಕಟೇಶಪ್ಪ, ಜಿ.ಎಚ್. ಉಮೇಶ್, ಅಣ್ಣಪ್ಪಚಾರ್, ಟಿ.ಆರ್.ಮಾರುತಿ, ದೇವೇಂದ್ರಪ್ಪ ಸೇರಿದಂತೆ ಅನೇಕ ಗ್ರಾಮಸ್ಥರು, ಮಹಿಳೆಯರು ಹಾಜರಿದ್ದರು.

Leave a Reply

Your email address will not be published. Required fields are marked *