ಹೊನ್ನಾಳಿ,19: ತಾಲೂಕಿನ ಅರಬಗಟ್ಟೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸುರೇಶಪ್ಪ ಎಂ. ಅವಿರೋಧವಾಗಿ ಆಯ್ಕೆಯಾಗಿದ್ದರೆ ಎಂದು ಚುನಾವಣಾಧಿಕಾರಿ ಮೃತ್ಯುಂಜಯಸ್ವಾಮಿ ಟಿ.ಎಂ. ಘೋಷಿಸಿದರು.ಗ್ರಾ.ಪಂ. ಅಧ್ಯಕ್ಷರಾಗಿದ್ದ ಶ್ರೀನಾಥ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.
ಚುನಾವಣೆಯಲ್ಲಿ ಸುರೇಶಪ್ಪ ಬಿಟ್ಟು ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವರ ಆಯ್ಕೆಯನ್ನು ಅವಿರೋಧ ಎಂದು ಘೋಷಿಸಲಯಿತು ವಿವರಿಸಿದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಶ್ರೀನಾಥ್,ಉಪಾಧ್ಯಕ್ಷೆ ಅನಿತ ಡಿ.ಕೆ.ಮಲ್ಲೇಶ ಕೆ.ವಿ.ನಾಗರಾಜ್,ಜಯಮ್ಮ,ರೇಣುಕಮ್ಮ,ಕರಿಯಮ್ಮ,ಹಳದಮ್ಮ,ಚಂದ್ರಮ್ಮ,ಎಸ್.ಆರ್.ಮಂಜುನಾಥ್,ಪಿಡಿಒ ಶ್ವೇತಾ,ಕಾರ್ಯದರ್ಶಿ ಕಾಮತರಾಜ್,ಕರಿಬಸಪ್ಪ,ವಿಜಯಕುಮಾರ್,ಚಿಕ್ಕಪ್ಪ ಹಾಗೂ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್,ರೇಣುಕಾಚಾರ್ಯ ಸಹೋದರ ರಾಜಣ್ಣ,ತಾ.ಪಂ ಮಾಜಿ ಸದಸ್ಯ ವಿಜಯಕುಮಾರ ಗ್ರಾಮದ ಮುಖಂಡರು ಅಧ್ಯಕ್ಷ ಸುರೇಶಪ್ಪನವರಿಗೆ ಅಭಿನಂದಿಸಿ ಗೌರವಿಸಿದರು.