ಹೊನ್ನಾಳಿ,19: ಹೊನ್ನಾಳಿ ತಾಲೂಕಿನ ದಿಡಗೂರು ಸಮೀಪದಲ್ಲಿ ಅಪರಾಧ ತಡೆ ಮಾಸಾಚರಣೆಯನ್ನು ಪೊಲೀಸ್ ಇಲಾಖೆವತಿಯಿಂದ ಆಯೋಜಿಸಲಾಗಿತ್ತು. ಇತ್ತೀಚೆಗೆ ಹೆಚ್ಚುತ್ತಿರುವ ಅಪಘಾತ ಸೇರಿದಂತೆ ಅಪರಾಧ ಕೃತ್ಯಗಳ ಬಗ್ಗೆ ಸಿಪಿಐ ಸುನೀಲ್ಕುಮಾರ್ ಅವರು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು. ಅಪರಾಧಗಳನ್ನು ತಡೆಯುವ ಕುರಿತು ಮಾತನಾಡಿದ ಗ್ರಾಮಗಳಲ್ಲಿನ ಸಮಾಜದಲ್ಲಿ ಜನರು ಸಣ್ಣ-ಸಣ್ಣ ವಿಷಯಕ್ಕೆ ಜಗಳ ಹೊಡೆದಾಡಿ ಅಪರಾದ ಮಾಡಿಕೊಂಡು ಠಾಣೆಗೆ ಬರುತ್ತಾರೆ ಗ್ರಾಮಗಳಲ್ಲಿ ಸಾಮರಸ್ಯದಿಂದ ಸ್ನೆಹದಿಂದ ಬಾಳಬೇಕು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಜಗದೀಶ್, ಹರೀಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.