ನ್ಯಾಮತಿ:ಮಲ್ಲಿಗೇನಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಂದಕಾಣಿಕೆ ಸಂಗ್ರಹಿಸಿ ಇಟ್ಟಿದ್ದಕಾಣಿಕೆ ಟ್ರಜರಿಯನ್ನು ಗುರುವಾರ ದುಷ್ಕರ್ಮಿಗಳು ಕಳವು ಮಾಡಿರುವ ಪ್ರಕರಣ ನಡೆದಿದೆ.
ಶುಕ್ರವಾರ ಮುಂಜಾನೆ ದೇವಸ್ಥಾನದ ಆರ್ಚಕ ಬಾಗಿಲು ತೆರೆಯಲು ಬಂದಾಗ ಪ್ರಕರಣ ಬಯಲಾಗಿದೆ.ದೇವಸ್ಥಾನದ ಕಬ್ಬಿಣದ ಬಾಗಿಲು ಮುರಿದು ಒಳಹೊಕ್ಕಿರುವ ದುಷ್ಕರ್ಮಿಗಳು ಹಳೆ ಕಾಲದ ಕಬ್ಬಿಣದ ಟ್ರಜರಿಯನ್ನು ಹೊತ್ತೊಯ್ದಿದ್ದಾರೆ.
ಟ್ರಜರಿಯಲ್ಲಿಅಂದಾಜುರೂ. 50 ಸಾವಿರಕಾಣಿಗೆ ಹಣ ಸಂಗ್ರಹವಾಗಿರಬಹುದು. ಕಳವು ಮಾಡಿರುವ ದುಷ್ಕರ್ಮಿಗಳನ್ನು ಪತ್ತೆ ಮಾಡಿಕೊಡುವಂತೆ ಹಾಗೂ ದೇವಸ್ಥಾನಕ್ಕೆ ಸೂಕ್ತ ರಕ್ಷಣೆಕೊಡುವಂತೆ ಹನುಮಂತ ದೇವರ ಜೀರ್ಣೋದ್ದಾರ ಸೇವಾ ಸಮಿತಿ ಅಧ್ಯಕ್ಷಎಂ.ಜಿ.ಬಸವರಾಜಪ್ಪ ಶುಕ್ರವಾರ ನ್ಯಾಮತಿ ಪೊಲೀಸರಿಗೆ ದೂರು ನೀಡಿದ್ದಾರೆ.