ನ್ಯಾಮತಿ:ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಪೋಷಕರ ಮತ್ತು ಸಂಘಟನೆಗಳು ಶಾಲೆಯೊಂದಿಗೆಕೈಜೋಡಿಸಬೇಕುಎಂದು ನಿವೃತ್ತ ಶಿಕ್ಷಕ ರಹಮತ್‍ಉಲ್ಲಾ ಮನವಿ ಮಾಡಿದರು.
ಪಟ್ಟಣದ ಸರ್ಕಾರಿಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಮತ್ತು ಗುರವಂದನಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಎಸ್‍ಡಿಎಂಸಿ ಅಧ್ಯಕ್ಷ ಶಮ್ಸ್‍ತಬ್ರೇಜ್‍ಅಧ್ಯಕ್ಷತೆ ವಹಿಸದ್ದರು.
ಬಿಜೆಪಿ ಮುಖಂಡ ಸಿ.ಕೆ.ರವಿಕುಮಾರ ಮಾತನಾಡಿ, ಉರ್ದು ಶಾಲೆಯಅಭಿವೃದ್ದಿಗೆ ಮೂಲಸೌಲಭ್ಯಒದಗಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಖಾಸಗಿ ಶಾಲೆಗಳಿಗೆ ಕಡಿಮೆಇರದಂತೆ ಸರ್ಕಾರಿಉರ್ದು ಶಾಲೆಯಲ್ಲಿ ಸಿಸಿಟಿವಿ ಕ್ಯಾಮೆರ, ಶುದ್ದಿಕರಿಸಿದ ಕುಡಿಯುವ ನೀರು, ಪೀಠೋಪಕರಣಗಳನ್ನು ಒದಗಿಸುವಲ್ಲಿ ಎಸ್‍ಡಿಎಂಸಿ ಸದಸ್ಯರ ಶ್ರಮವನ್ನು ಶ್ಲಾಘಿಸಿ, ಮುಸ್ಲಿಂ ಪೋಷಕರುತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಲು ಮುಂದಾಗಬೇಕು. ಮುಂದಿನ ದಿನಗಳಲ್ಲಿ 8ನೇ ತರಗತಿಆರಂಭಿಸುವಂತೆ ಎಸ್‍ಡಿಎಂಸಿ ಸದಸ್ಯರಿಗೆಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಮನವಿ ಮಾಡಿದರು.
ನಿವೃತ್ತ ಶಿಕ್ಷಕಿ ಚಂದ್ರಮ್ಮ, ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಸಹಶಿಕ್ಷಕರಾಗಿರುವ ಗುಲ್ಮಾನಾಜ್‍ಪರ್ವಿನ್ ಮತ್ತು ನಜ್ಮಾಅವರನ್ನು ಸನ್ಮಾನಿಸಲಾಯಿತು.
ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಶಮ್ಸ್‍ತಬ್ರೇಜ್‍ಅಧ್ಯಕ್ಷತೆ ವಹಿಸಿದ್ದರು.
ಜಾಮೀಯ ಮಸೀದಿ ಅಧ್ಯಕ್ಷಜಬೀವುಲ್ಲಾ, ಸಮಾಜದ ಹಿರಿಯರಾದ ಬಾಬುಸಾಬ್, ಸಲಾಂಸಾಬ್,ಮಂಡಕ್ಕಿ ಬಾಬುಸಾಬ್, ಅಮೀರ್‍ಸಾಬ್, ಮಹಮದ್‍ಅಸ್ಲಮ್, ಪೈಂಟರ್ ಮುನ್ನ, ಮುನೀರ್‍ಪಾಷಾ, ಇದಾಯತ್‍ವುಲ್ಲಾ, ಶಿಕ್ಷಕ ರಹಮತ್ ಉಪಸ್ಥಿತರಿದ್ದರು.
ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಸೈಯದ್‍ಅಕ್ಬರ್ ಪಾಷಾ ಪ್ರಾಸ್ತಾವಿಕ ಮಾತನಾಡಿದರು.ಶಾಲೆಯ ಮುಖ್ಯಶಿಕ್ಷಕಿ ಅಬೀದಬಾನು ಹೊನ್ನಳ್ಳಿ ಸ್ವಾಗತಿಸಿದರು, ಸಹಶಿಕ್ಷಕ ಬಿ.ಎಸ್.ಉಮೇಶ ನಿರೂಪಿಸಿದರು, ಜಿ.ಮಮತಾ ವಾರ್ಷಿಕ ವರದಿ ವಾಚನ ಮಾಡಿದರು.
ಸಹಶಿಕ್ಷಕರಾದ ಶಾಹಿಸ್ತಾ ತ್ಯಾವರರ್ಗಿ, ಶಹೀದಾಬಾನು, ಉಮ್ಮೆರುಮಾನ್, ಸಿಬ್ಬಂದಿಗಳಾದ ಸರೋಜಮ್, ಪರ್ವಿನ್‍ಇದ್ದರು.
ಶಾಲೆಯ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

Leave a Reply

Your email address will not be published. Required fields are marked *