ಹೊನ್ನಾಳಿ ಜನವರಿ 8 ಪಟ್ಟಣದ ದೇವ ನಾಯಕನಹಳ್ಳಿಯಲ್ಲಿರಿವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇಂದು ಉಪಾಧ್ಯಕ್ಷರಗಾದೆಗೆ ಚುನಾವಣೆ ನಡೆಯಿತು.
ಉಪಾಧ್ಯಕ್ಷರ ಗಾದೆಗೆ ಡಿಬಿ ಮಹೇಂದ್ರರವರು ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ ಸದಸ್ಯರುಗಳು ಉಪಾಧ್ಯಕ್ಷರ ಗಾದೆಗೆ ನಾಮಪತ್ರ ಅರ್ಜಿಯನ್ನು ಸಲ್ಲಿಸದೆ ಇರುವ ಹಿನ್ನೆಲೆಯಲ್ಲಿ ಡಿಬಿ ಮಹೇಂದ್ರರವರನ್ನ ಉಪಾಧ್ಯಕ್ಷರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾ ಅಧಿಕಾರಿಗಳಾದ ಮತ್ತು ಹೊನ್ನಾಳಿ ಸಿಡಿಓ ನವೀನ್ ರವರು ಘೋಷಣೆ ಮಾಡಿದರು.
ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಿಬಿ ಮಹೇಂದ್ರ ಕುಮಾರ್ ಅವರಿಗೆ ಆಡಳಿತ ಮಂಡಳಿಯ ಸರ್ವ ಸದಸ್ಯರುಗಳಿಂದ ಅಭಿನಂದನೆ ಸಲ್ಲಿಸಿದರು.
ಆಡಳಿತ ಮಂಡಳಿಯ ಅಧ್ಯಕ್ಷ ಎಜಿ ಪ್ರಕಾಶ್ ಮತ್ತು ಮಾಜಿ ಉಪಾಧ್ಯಕ್ಷರಾದ ವಿನೋದಮ್ಮ ಡಿಎಂ,ನಿರ್ದೇಶಕರು ಬಿ ಹೆಚ್ ಕುಮಾರ್, ಡಿಜೆ ಚಂದ್ರಪ್ಪ, ಎಚ್ ಪಿ ಗುರುಬಸಪ್ಪ, ಜಿ ಎಚ್ ಗಣೇಶಪ್ಪ, ಪಿ ಮಲ್ಲಪ್ಪ, ಕೆ ಹೆಚ್ ಪರಮೇಶ್, ಬಿಕೆ ರಮೇಶ್, ಎಸ ಎಚ್ ಮಾರುತಿ, ಶ್ರೀಮತಿ ಸುಶೀಲಮ್ಮ, ಬಿ ಪಿ , ಮುಖ್ಯ ಕಾರ್ಯನಿರ್ವಣಧಿಕಾರಿ ಚೇತನ್ ಜಿಎಂ, ಆಡಳಿತ ಮಂಡಳಿಯ ಸಿಬ್ಬಂದಿ ವರ್ಗದವರು ಸಹ ಇದ್ದರು.

Leave a Reply

Your email address will not be published. Required fields are marked *