ನ್ಯಾಮತಿ:ತಾಲ್ಲೂಕು ಕುರುವ ಗ್ರಾಮದಲ್ಲಿ ಭಾನುವಾರ ಆಂಜನೇಯಸ್ವಾಮಿ, ಬಸವೇಶ್ವರಸ್ವಾಮಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ, ದೀಪಾಳಿ ಕಂಬದಉದ್ಘಾಟನೆಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸರ್ಕಾರ ಮಹಿಳೆಯರಿಗೆ ಕೊಟ್ಟ ಗ್ಯಾರಂಟಿಗಳಂತೆ, ಪುರಷರ ಬಗ್ಗೆಯೂ ಕಾಳಜಿ ವಹಿಸಬೇಕು, ತಾರತಮ್ಯ ಮಾಡಬಾರದು ಎಂದರು.
ಭಗವಂತ ಸರ್ವವ್ಯಾಪಿಯಾಗಿದ್ದುಎಲ್ಲವನ್ನುಕೊಡುತ್ತಾನೆ, ವ್ಯಕ್ತಿಯ ಬದುಕಲ್ಲಿಧರ್ಮವೇ ಮುಖ್ಯ, ಎಲ್ಲರೂಧರ್ಮದ ತಳಹದಿಯಲ್ಲಿ ನಡೆಯಬೇಕುಎಂದು ಗೋವಿನಕೋವಿ ಹಾಲಸ್ವಾಮಿ ಮಠದ ಪೀಠಾಧ್ಯಕ್ಷ ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮಿಗಳು ಹೇಳಿದರು.
ಗುರುಹಿರಿಯರಲ್ಲಿ, ತಂದೆತಾಯಿ, ದೇವರಲ್ಲಿ ನಂಬಿಕೆ ಇಟ್ಟು ನಡೆಯಿರಿ, ಇದರಿಂದ ಪ್ರತಿಯೊಬ್ಬರುಉತ್ತಮಜೀವನ ನಡೆಸಬಹುದು.ಇಂದುಧರ್ಮ ಉಳಿದಿದ್ದರೆ ಹೆಣ್ಣುಮಕ್ಕಳಿಂದ ಮಾತ್ರಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ರಾಂಪುರ ಹಾಲಸ್ವಾಮಿ ಮಠದ ಶಿವಕುಮಾರ ಸ್ವಾಮಿಜಿ, ದಿಡಗೂರುಅಣ್ಣಪ್ಪಸ್ವಾಮಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.
ದೇವಸ್ಥಾನಗಳ ಆಡಳಿತ ಮಂಡಳಿ ಅಧ್ಯಕ್ಷಅರಬಗಟ್ಟೆ ಪರಮೇಶ್ವರಪ್ಪಅಧ್ಯಕ್ಷತೆ ವಹಿಸಿದ್ದರು.
ವಕೀಲರಾದ ಕೆ.ಎಚ್.ಪಲ್ಲವಿ, ನಿವೃತ್ತ ಶಿಕ್ಷಕ ಹಾಲಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ದಾನೇಶ,ಎಚ್.ವಿ.ಸತೀಶ,ಸುರೇಶ,ಲಿಂಗಮೂರ್ತಿ, ಬಸವರಾಜಪ್ಪ, ಪಾಲಾಕ್ಷಪ್ಪ, ಕೆ.ಎನ್.ಮಹೇಶ್ವರಪ್ಪ ಉಪಸ್ಥಿತರಿದ್ದರು.
ದಿಡಗೂರು, ಚಟ್ನಹಳ್ಳಿ, ಕುಂಕುವ, ಹಿರೇಬಾಸೂರು ಗ್ರಾಮಗಳ ಆಂಜನೇಯಸ್ವಾಮಿಉತ್ಸವ ಮೂರ್ತಿಗಳು, ಗೋವಿನಕೋವಿ ನರಸಿಂಹಸ್ವಾಮಿ, ಚಿ.ಕಡದಕಟ್ಟೆರಂಗನಾಥಸ್ವಾಮಿ ದೇವರುಗಳು ಗ್ರಾಮಕ್ಕೆ ಆಗಮಿಸಿದ್ದವು.
ಆಂಜನೇಯಸ್ವಾಮಿ ಆಡಳಿತ ಮಂಡಳಿ, ಬಸವೇಶ್ವರಸ್ವಾಮಿ ಆಡಳಿತ ಮಂಡಳಿ ಹಾಗೂ ಕುರುವ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಎಲ್ಲಾಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

Leave a Reply

Your email address will not be published. Required fields are marked *

You missed