ನ್ಯಾಮತಿ:ತಾಲ್ಲೂಕು ಭಾಯಾಗಡ್ನಲ್ಲಿ ಫೆ.13,14,15ರಂದು ನಡೆಯಲಿರುವ ಸೇವಾಲಾಲ್ ಜಯಂತ್ಯುತ್ಸವ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ ಪೂರ್ವಸಿದ್ದತೆಯನ್ನು ಜಿಲ್ಲಾಧಿಕಾರಿಜಿ.ಎಂ.ಗಂಗಾಧರಸ್ವಾಮಿ ಮಂಗಳವಾರ ವೀಕ್ಷಿಸಿದರು.
ಸೇವಾಲಾಲ್ಜಯಂತ್ಯುತ್ಸವ ಯಶಸ್ವಿಗೆ ಎಲ್ಲರ ಸಹಕಾರ ಬೇಕು.ಬರುವ ಭಕ್ತಾದಿಗಳಿಗೆ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದುಜಿಲ್ಲಾ ಮತ್ತುತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಸುಗಮ ಸಂಚಾರ ವ್ಯವಸ್ಥೆಗೆ ಹೊಸಜೋಗ ಮತ್ತುಚಿನ್ನಿಕಟ್ಟೆರಸ್ತೆಯ ಬಳಕೆ, ಹೆಲಿಪ್ಯಾಡ್ ನಿರ್ಮಾಣ, ಊಟದ ವ್ಯವಸ್ಥೆ, ಶೌಚಾಲಯ ನಿರ್ಮಾಣ, ರಂಗಮಂದಿರ, ಬಸ್ ತಂಗುದಾಣ, ಮಾರಾಟ ಮಳಿಗೆಗಳ ಸ್ಥಳ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಒಳಗೊಂಡಂತೆ ದೇವಸ್ಥಾನಆವರಣ ಸುತ್ತಮುತ್ತ ಸ್ಥಳ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ವಿ.ಅಭಿಷೇಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಉಮಾ ಪ್ರಶಾಂತ್, ತಾಂಡಅಭಿವೃದ್ದಿ ನಿಗಮದಅಧ್ಯಕ್ಷಜಯದೇವನಾಯ್ಕ, ನಿಗಮದ ವ್ಯವಸ್ಥಾಪಕಎನ್.ರಾಜು, ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ತಾಲ್ಲೂಕು ಪಂಚಾಯಿತಿ ಇಒ ಎಚ್.ವಿ.ರಾಘವೇಂದ್ರ, ಲೋಕೋಪಯೋಗಿ ಇಲಾಖೆ ಕಣಮಪ್ಪ, ಮಾಜಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರನಾಯ್ಕ,ಚಿನ್ನಿಕಟ್ಟೆ ಪಿಡಿಒಜ್ಯೋತಿಶೆಟ್ಟಿ, ಭಾಯಾಗಡ್ ವ್ಯವಸ್ಥಾಪಕರಾದಜೆ.ಹರೀಶ ಮತ್ತು ಸೇವ್ಯಾನಾಯ್ಕ ಹಾಗೂ ಜಿಲ್ಲಾ ಮತ್ತುತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು
