ನ್ಯಾಮತಿ:
ಪಟ್ಟಣದ ಮೈಲಾರಲಿಂಗೇಶ್ವರಸ್ವಾಮಿದೇವಸ್ಥಾನದ ನೂತನಕಟ್ಟಡಗೃಹಪ್ರವೇಶ, ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ವಿವಿಧಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ನೆರವೇರಿತು.
ಹಿರೇಕಲ್ಮಠಒಡೆಯರಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಅವರ ನೇತೃತ್ವದಲ್ಲಿ ದೀಪಾಲೆ ಕಂಭ ಪ್ರತಿಷ್ಠಾಪನೆ ಮತ್ತುಧ್ವಜಾರೋಹಣ, ನೂತನದೇವಸ್ಥಾನಗೃಹಪ್ರವೇಶ,ಮೈಲಾರಲಿಂಗೇಶ್ವರಸ್ವಾಮಿ, ಗಂಗಮಾಳಮ್ಮದೇವಿ, ಪಂಚಮುಖಿ ಗಣಪತಿ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮಗಳು ನೆರವೇರಿಸಲಾಯಿತು.
ಕೋಹಳ್ಳಿಮಠದ ವಿಶ್ವರಾಧ್ಯರು ಮತ್ತುಅವರತಂಡzವರು ಪೌರೋಹಿತ್ಯ ನಡೆಸಿದರು.
ವಿವಿಧ ಭಾಗಗಳಿಂದ ಗೊರವಪ್ಪ, ಗೊರವಮ್ಮಗಳು, ಮೈಲಾರಲಿಂಗನ ಭಕ್ತರು ಆಗಮಿಸಿದ್ದರು.ದೇವಸ್ಥಾನ ವತಿಯಿಂದ ಸಾಮೂಹಿಕ ಅನ್ನಸಂತರ್ಪಣೆಏರ್ಪಡಿಸಲಾಗಿತ್ತು.
ಈ ಎಲ್ಲಾಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಮೈಲಾರಲಿಂಗೇಶ್ವರದೇವಸ್ಥಾನ ಭಕ್ತಮಂಡಳಿಯವರು ವಹಿಸಿದ್ದರು.

Leave a Reply

Your email address will not be published. Required fields are marked *

You missed