ನ್ಯಾಮತಿತಾಲ್ಲೂಕು ಭಾಯಾಗಡ್‍ನಲ್ಲಿ ಸಂತ ಸೇವಾಲಾಲ ಅವರ 286ನೇ ಜಯಂತ್ಯುತ್ಸವಕಾರ್ಯಕ್ರಮದಲ್ಲಿಊಟಕ್ಕೆ ಬಳಸುವ ಆಹಾರ ಪದಾರ್ಥಗಳು, ತರಕಾರಿ ಗುಣಮಟ್ಟದಿಂದ ಕೂಡಿರಬೇಕು, ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಆಹಾರ ಸುರಕ್ಷತಾಧಿಕಾರಿಡಾ.ನಾಗರಾಜ ಸಲಹೆ ನೀಡಿದರು.
ಗುರುವಾರ ಭಾಯಗಡ್‍ನಲ್ಲಿ ಭಕ್ತರಿಗೆ ತಯಾರಿಸಿದ ವಿವಿಧಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅವರು ಮಾತನಾಡಿದರು.
ದಾಸೋಹದಲ್ಲಿ ತಯಾರಾಗುವ ಆಹಾರ ಪದಾರ್ಥಗ¼ನ್ನು ಫೆ.13 ರಿಂದ ಫೆ.15ರವರೆಗೆ ಸಂಗ್ರಹಿಸಲಾಗುವುದು.ಪ್ರತಿಯೊಬ್ಬರುಅಡುಗೆ ಸಿಬ್ಬಂದಿ ಮಾಸ್ಕ್‍ಧರಿಸುವಂತೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ, ಜಿಲ್ಲಾ ಆಯುಷ್‍ ಆಧಿಕಾರಿಡಾ.ಯೋಗೇಂದ್ರಕುಮಾರ, ತಾಲ್ಲೂಕು ಆಹಾರ ಸುರಕ್ಷತಾಧಿಕಾರಿ ನಮಿತಕುಮಾರ, ಆಯುಷ್ ವೈದ್ಯಾಧಿಕಾರಿ ಡಾ. ಲಿಂಗರಾಜೇಂದ್ರ, ಡಾ.ಮಲ್ಲಿಕಾರ್ಜುನ, ಹಿರಿಯ ಆರೋಗ್ಯಾಧಿಕಾರಿ ಶಿವಪದ್ಮ, ಡಾ.ರವಿ ಗಂಗೂರು ಹಾಗೂ ಬೆಂಗಳೂರಿನಇವೆಂಟ್ಸ್ ಮೇನೆಜ್‍ಮೆಂಟ್‍ನ ಅಡುಗೆ ಗುತ್ತಿಗೆದಾgರಾದ ಪ್ರೀಯಾ ಸೋಮಶೇಖರ ಇದ್ದರು.

Leave a Reply

Your email address will not be published. Required fields are marked *

You missed