(ನ್ಯಾಮತಿ):ಸವಳಂಗ ತಾಲ್ಲೂಕಿನ ಭಾಯಾಗಡ್‍ದಲ್ಲಿ ನಡೆಯುತ್ತಿರುವ ಸಂತ ಸೇವಾಲಾಲ್‍ಅವರ 286ನೇ ಜಯಂತ್ಯುತ್ಸವ ಸಲುವಾಗಿ ಸವಳಂಗ ಗ್ರಾಮದ ಮುಖ್ಯ ವೃತ್ತದಲ್ಲಿ ಕಾಟಿ ಆರೋಹಣ ಮಾಡುವ ಮೂಲಕ ಜಯಂತ್ಯುತ್ಸಕ್ಕೆ ಸೋಮವಾರ ವಿದ್ಯುಕ್ತ ಚಾಲನೆ ನೀಡಲಾಯಿತು.
ಸೇವಾಲಾಲ್‍ಅವರ ಭಾವಚಿತ್ರ ಮತ್ತು ಕಾಟಿ ಧ್ವಜಕ್ಕೆಬಂಜಾರ ಸಮುದಾಯದ ಮುಖಂಡರಾದ ರಾಮನಾಯ್ಕ, ಭೂಪಾಲನಾಯ್ಕ, ಮಾಜಿಸೈನಿಕ ಮಂಜನಾಯ್ಕ, ರೇಣುನಾಯ್ಕ, ನಾಗರಾಜನಾಯ್ಕ, ಸಾಲಬಾಳು ಮಂಜುನಾಯ್ಕ, ತಾತ್ಯಾನಾಯ್ಕ, ರುದ್ರೇಶನಾಯ್ಕ, ಕಿರಣನಾಯ್ಕ ಮತ್ತು ಮಾಲಾಧಾರಿಗಳು ಪೂಜೆ ನೆರವೇರಿಸಿದರು.
