(ನ್ಯಾಮತಿ):
ಸಂತ ಸೇವಾಲಾಲ್ ಅವರ 286ನೇ ಜಯಂತ್ಯುತ್ಸವ ಕಾರ್ಯಕ್ರಮ ಫೆ.13ರಿಂದ
ಮೂರು ದಿನ ನಡೆಯಲಿದ್ದು. ಲಕ್ಷಾಂತರ ಜನ ಭಕ್ತರು ಆಗಮಿಸುವ
ನಿರೀಕ್ಷೆ ಇದೆ.
ಜಾತ್ರೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಉಮಾ ಪ್ರಶಾಂತ ಅವರು 5ಜನ ಡಿವೈಎಸ್ಪಿ, 18 ಜನ ಸರ್ಕಲ್
ಇನ್ಸ್‍ಪೆಕ್ಟರ್, 46 ಜನ ಪೊಲೀಸ್ ಸಬ್‍ಇನ್ಸ್‍ಪೆಕಟರ್, 75 ಜನ ಸಹಾಯಕ ಸಬ್
ಇನ್ಸ್‍ಪೆಕ್ಟರ್, 550 ಜನ ಪೊಲೀಸರು, 350 ಗೃಹರಕ್ಷಕದಳದವರು,
ಕೆಎಸ್‍ಆರ್‍ಪಿ 3 ತುಕಡಿಗಳು, ಡಿಎಆರ್ 3 ತುಕಡಿಗಳನ್ನು ನೇಮಿಸಿದ್ದಾರೆ.
ರಸ್ತೆಯ ಇಕ್ಕೆಲಗಳಲ್ಲಿ ಆಯ್ದ ಸ್ಥಳಗಳಲ್ಲಿ ಸಂಚಾರ ನಿಯಮ ಸೂಚನಾ
ಫಲಕ, ಬ್ಯಾರಿಕೇಡ್‍ಗಳನ್ನು ಅಳವಡಿಸುವ ಮೂಲಕ ವಾಹನ ಸವಾರರಿಗೆ
ಮಾರ್ಗದರ್ಶನ ನೀಡುವ ಫಲಕಗಳನ್ನು ಹಾಕಲಾಗಿದೆ ಎಂದು ನ್ಯಾಮತಿ
ಪೊಲೀಸ್ ಇನ್ಸ್‍ಪೆಕ್ಟರ್ ಎನ್.ಎಸ್.ರವಿ ತಿಳಿಸಿದರು.
