ನ್ಯಾಮತಿ:ಭಾಯಾಗಡ್ ಸಂತ ಸೇವಾಲಾಲ್ ಮತ್ತು ಮರಿಯಮ್ಮದೇವಿ ಅವರ 286ನೇ ಜಯಂತ್ಯುತ್ಸವಕ್ಕೆಶುಕ್ರವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಈ ಸಂಬಂಧ ಮುಂಜಾನೆ ಮರಿಯಮ್ಮದೇವಸ್ಥಾನದಿಂದ 101 ಕುಂಭಗಳನ್ನು ಹೊತ್ತ ಮಹಿಳೆಯರು ಮರಿಯಮ್ಮ ಮತ್ತು ಸೇವಾಲಾಲ್‍ಅವರಉತ್ಸವ ಮೂರ್ತಿಗಳೊಂದಿಗೆ ದೂದ್ಯಾ ತಳಾವ್(ಕೆರೆ) ಬಳಿ ತೆರಳಿ ಗಂಗಾಪೂಜೆ ನೆರವೇರಿಸಿದರು. ಅಲ್ಲಿಂದ ಮರಳಿ ದೇವಸ್ಥಾನಕ್ಕೆ ಬಂದುಕಾಟಿಪೂಜೆ ನೆರವೇರಿಸಿದ ನಂತರ 11 ಕುಂಭಗಳ ಗಂಗಾ ಜಲದಿಂದ ಮರಿಯಮ್ಮ ಮತ್ತು ಸೇವಾಲಾಲ್‍ಅವರ ಮೂರ್ತಿಗಳಿಗೆ ಅಭಿಷೇಕ ಮಾಡುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳು ಚಾಲನೆಗೊಂಡವು.
ವಿವಿಧ ಭಾಗಗಳಿಂದ ಆಗಮಿಸಿದ್ದ ಮಾಲಾಧಾರಿಗಳು ಪವಿತ್ರ ವೃಕ್ಷದ ಬಳಿ ಗುರುಗಳ ಸಮ್ಮುಖದಲ್ಲಿ ಮಾಲಾ ವಿಸರ್ಜನೆ ಮಾಡಿದರು.
ಫೆ.15ರಂದು ಬೆಳಿಗ್ಗೆ ವಿವಿಧಧಾರ್ಮಿಕ ವಿಧಿವಿಧಾನಗಳೊಂದಿಗೆ ಭೋಗ್(ಹೋಮದಕುಂಡ) ಬಳಿ ವಿಶೇಷ ಪೂಜೆ ನೆರವೇರಿದ ನಂತರ ಭೋಗ್‍ಕುಂಡವನ್ನು ಬೆಳಗಿಸಿ ಪೂರ್ಣಾಹುತಿ ನೀಡುವ ಮೂಲಕ ಮೂರು ದಿನದಜಾತ್ರೆಗೆ ತೆರೆಬೀಳಲಿದೆ.
