ನ್ಯಾಮತಿ ತಾಲ್ಲೂಕು ಭಾಯಾಗಡ್‍ನಲ್ಲಿ ಗುರುವಾರ ಸಂತ ಸೇವಾಲಾಲ್ ಅವರ 286ನೇ ಜಯಂತ್ಯುತ್ಸವ ಅಂಗವಾಗಿ ಉಪವಿಭಾಗಾಧಿಕಾರಿ ವಿ.ಅಭಿಷೇಕ ಅವರು ಪ್ರವೇಶ ದ್ವಾರದಲ್ಲಿ ಕಾಟಿ ಆರೋಹಣ(ಕೆಂಪು ಮತ್ತು ಬಿಳಿಧ್ವಜ) ನೆರವೇರಿಸುವುದರೊಂದಿಗೆ ಜಾತ್ರೆಗೆ ವಿದ್ಯುಕ್ತ ಚಾಲನೆ ನೀಡಿದರು. ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ತಾಂಡ ಅಭಿವೃದ್ದಿ ನಿಗಮ ವ್ಯವಸ್ಥಾಪಕ ಎನ್.ಮಂಜು, ಮಹಾಮಠ ಸಮಿತಿ ಅಧ್ಯಕ್ಷ ಹನುಮಂತನಾಯ್ಕ, ಮುಖಂಡರಾದ ಸಾಲಬಾಳು ಗೋಪಾಲನಾಯ್ಕ,ಯಂಕನಾಯ್ಕ, ಹೀರಾಲಾಲ್, ಸುಮಾ ಭೋಜ್ಯನಾಯ್ಕ, ಪ್ರತಿಷ್ಟಾನ ಯೋಜನಾ ನಿರ್ದೇಶಕ ಜೆ.ಹರೀಶ, ಮಹಾಮಠ ಸಮಿತಿ ವ್ಯವಸ್ಥಾಪಕ ಸೇವ್ಯಾನಾಯ್ಕ ಸೇವಾಲಾಲ್ ಅರ್ಚಕ ಸೇವ್ಯಾನಾಯ್ಕ, ಮರಿಯಮ್ಮದೇವಿ ಆರ್ಚಕ ಮಂಜುನಾಯ್ಕ ಹಾಗೂ ವಿವಿಧ ಕಡೆಯಿಂದ ಆಗಮಿಸಿರುವ ಭಕ್ತರು ಇದ್ದರು.