ನ್ಯಾಮತಿ:ತಾಲ್ಲೂಕು ಸೂರಗೊಂಡನಕೊಪ್ಪ ಭಾಯಾಗಡ್‍ನಲ್ಲಿ ಸಂತ ಸೇವಾಲಾಲ್ ಮತ್ತು ಮರಿಯಮ್ಮಜಯಂತ್ಯುತ್ಸವದಅಂತಿಮ ದಿನ ಶನಿವಾರ ಭೋಗ್(ಹೋಮಕುಂಡಕೆ) ಸಾವಿರಾರು ಭಕ್ತರ ಸಮ್ಮುಖದಲ್ಲಿ ಪೂಜೆ ನೆರವೇರಿಸಲಾಯಿತು.
ನ್ಯಾಮತಿ:ತಾಲ್ಲೂಕಿನ ಸೂರಗೊಂಡನಕೊಪ್ಪ ಭಾಯಾಗಡ್‍ನಲ್ಲಿ ನಡೆದ ಸಂತ ಸೇವಾಲಾಲ್‍ಅವರ 286ನೇ ಜಯಂತ್ಯುತ್ಸವಕ್ಕೆ ಶನಿವಾರ ಹೋಮಕ್ಕೆ ಪೂರ್ಣಾಹುತಿಅರ್ಪಿಸುವುದರೊಂದಿಗೆತೆರೆ ಬಿದ್ದಿತು.ಶನಿವಾರ ಬೆಳಿಗ್ಗೆ ಹೋಮಕುಂಡದಆವರಣಕ್ಕೆಅಲಂಕೃತ ಪಲ್ಲಕ್ಕಿಯಲ್ಲಿ ಮರಿಯಮ್ಮ ಮತ್ತು ಸೇವಾಲಾಲ್‍ಉತ್ಸವ ಮೂರ್ತಿಗಳನ್ನು ತರಲಾಯಿತು. ವಿವಿಧ ಬಣ್ಣದರಂಗೋಲಿ, ಹೂವಿನಿಂದ ಆಲಂಕರಿಸಿದ್ದ ಹೋಮಕುಂಡಕ್ಕೆ(ಭೋಗ್) ಒಂಭತ್ತು ವಿವಿಧಜಾತಿಯ ಮರದ ಚೆಕ್ಕೆಗಳು, ಗಂಧದ…