ನ್ಯಾಮತಿ:ತಾಲ್ಲೂಕಿನ ಸೂರಗೊಂಡನಕೊಪ್ಪ ಭಾಯಾಗಡ್‍ನಲ್ಲಿ ನಡೆದ ಸಂತ ಸೇವಾಲಾಲ್‍ಅವರ 286ನೇ ಜಯಂತ್ಯುತ್ಸವಕ್ಕೆ ಶನಿವಾರ ಹೋಮಕ್ಕೆ ಪೂರ್ಣಾಹುತಿಅರ್ಪಿಸುವುದರೊಂದಿಗೆತೆರೆ ಬಿದ್ದಿತು.
ಶನಿವಾರ ಬೆಳಿಗ್ಗೆ ಹೋಮಕುಂಡದಆವರಣಕ್ಕೆಅಲಂಕೃತ ಪಲ್ಲಕ್ಕಿಯಲ್ಲಿ ಮರಿಯಮ್ಮ ಮತ್ತು ಸೇವಾಲಾಲ್‍ಉತ್ಸವ ಮೂರ್ತಿಗಳನ್ನು ತರಲಾಯಿತು. ವಿವಿಧ ಬಣ್ಣದರಂಗೋಲಿ, ಹೂವಿನಿಂದ ಆಲಂಕರಿಸಿದ್ದ ಹೋಮಕುಂಡಕ್ಕೆ(ಭೋಗ್) ಒಂಭತ್ತು ವಿವಿಧಜಾತಿಯ ಮರದ ಚೆಕ್ಕೆಗಳು, ಗಂಧದ ಚೆಕ್ಕೆ, ತುಪ್ಪತುಂಬಿದಇರುಮುಡಿ ಕಾಯಿಗಳನ್ನು ಧಾರ್ಮಿಕ ವಿಧಾನಗಳೊಂದಿಗೆ ಜೋಡಿಸಿ, ಕರ್ಪೂರದ ಮೂಲಕ ಕುಂಡವನ್ನು ಬೆಳಗಿಸಿ, ಗೋಧಿ ಪಾಯಸ ಮತ್ತುತುಪ್ಪವನ್ನು ನೈವೇದ್ಯವಾಗಿಅರ್ಪಿಸಲಾಯಿತು.
ಹೋಮ ಕುಂಡದಧಾರ್ಮಿಕ ವಿಧಿ-ವಿಧಾನಗಳನ್ನು ಸಾಧು ಸಂತರ ಮಾರ್ಗದರ್ಶನದಲ್ಲಿ ಸೇವಾಲಾಲ್‍ದೇವಸ್ಥಾನದಆರ್ಚಕ ಸೇವ್ಯಾನಾಯ್ಕ, ಮರಿಯಮ್ಮದೇವಸ್ಥಾನದಆರ್ಚಕ ಮಂಜುನಾಥನಾಯ್ಕ ಮತ್ತು ವಿವಿಧ ಸಾಧು ಸಂತರು ನೆರವೇರಿಸಿದರು.
ಮಹಾಹಾಮಠ ಸಮಿತಿಅಧ್ಯಕ್ಷರುದ್ರಪ್ಪ ಮಾನಪ್ಪ ಲಮಾಣಿ,ಮಹಾಮಠ ನಿರ್ವಾಹಣಾ ಸಮಿತಿಅಧ್ಯಕ್ಷ ಹನುಮಂತನಾಯ್ಕ, ತಾಂಡಅಭಿವೃದ್ದಿ ನಿಗಮ ಅಧ್ಯಕ್ಷಎನ್. ಜಯದೇವನಾಯ್ಕ, ವ್ಯವಸ್ಥಾಪಕ ನಿರ್ದೇಶಕಎನ್.ರಾಜು, ಉಪವಿಭಾಗಾಧಿಕಾರಿ ವಿ.ಅಭಿಷೇಕ, ಡಿವೈಎಸ್ಪಿ ಶ್ಯಾಮ್‍ವರ್ಗಿಸ್, ಮಹಾಮಠ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಅರುಣಕುಮಾರ, ಹರಪನಹಳ್ಳಿ ಹೀರಾಲಾಲ್, ಶಿವರಾಂನಾಯ್ಕ, ಸುರೇಂದ್ರನಾಯ್ಕ, ಮಾರುತಿನಾಯ್ಕ, ಮಲ್ಲಿಕಾರ್ಜುನ, ಗೋಪಾಲನಾಯ್ಕ, ಭೋಜ್ಯನಾಯ್ಕ, ಪ್ರತಿಷ್ಠಾನ ಯೋಜನಾ ನಿರ್ದೇಶಕಜೆ.ಹರೀಶ, ಮಹಾಮಠ ಸಮಿತಿ ವ್ಯವಸ್ಥಾಪಕ ಸೇವ್ಯಾನಾಯ್ಕ, ನ್ಯಾಮತಿ ಪಿಐ ಎನ್.ಎಸ್. ರವಿ ವಿವಿಧ ಇಲಾಖೆಗಳ ಮುಖ್ಯಸ್ಥರುಇದ್ದರು.

Leave a Reply

Your email address will not be published. Required fields are marked *

You missed