ಹೊನ್ನಾಳಿ: ಹೊನ್ನಾಳಿ ತಾಲ್ಲೂಕಿನ ವೀರಶೈವ ಪಂಚಮಸಾಲಿ ಸಮಾಜದ ನೌಕರರ ಘಟಕದ ನೂತನ ಅಧ್ಯಕ್ಷರಾಗಿ ಒಡೆಯರತ್ತೂರು ಅಶೋಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ದೊಡ್ಡಪ್ಪ ಜಿ. ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು ಎಂದು ಪಿ. ವೀರಣ್ಣ ತಿಳಿಸಿದ್ದಾರೆ.
ಪಟ್ಟಣದ ವೀರಭದ್ರೇಶ್ವರ ದೇವಾಲಯದಲ್ಲಿ ಹರಿಹರ ಮಠದ ಆಡಳಿತಾಧಿಕಾರಿ ಡಾ. ಎಚ್.ಪಿ ರಾಜ್ ಕುಮಾರ್, ದಾವಣಗೆರೆ ಜಿಲ್ಲೆಯ ನೌಕರರ ಘಟಕದ ಜಿಲ್ಲಾಧ್ಯಕ್ಷ ಶ್ರೀಧರ್, ದಾವಣಗೆರೆ ನಗರ ಘಟಕದ ಅಧ್ಯಕ್ಷ ಮಲ್ಲಿನಾಥ್, ದಾವಣಗೆರೆ ನಗರದ ನೌಕರ ಘಟಕದ ಗೌರವಾಧ್ಯಕ್ಷ ವಿಶ್ವನಾಥ್ ಎಂ, ಅಧ್ಯಕ್ಷ ನಿಂಗಪ್ಪ ಇಟ್ಟಿಗೆ, ದಾವಣಗೆರೆ ಜಿಲ್ಲೆಯ ಕಾನೂನು ಸಲಹೆಗಾರ ಬಾದಾಮಿ ಚಂದ್ರಶೇಖರ್, ಹೊನ್ನಾಳಿ ತಾಲ್ಲೂಕು ಅಧ್ಯಕ್ಷ ಬೆನಕನಹಳ್ಳಿ ಪಿ.ವೀರಣ್ಣ, ನಿಕಟಪೂರ್ವ ಅಧ್ಯಕ್ಷ ದೊಡ್ಡಪ್ಪ ಜಿ., ನೌಕರರಾದ ವೀರೇಶಪ್ಪ ಬಿ, ದೀಪಕ್ ಎನ್.ಎಂ, ಹಾಲಸ್ವಾಮಿ, ಕೆ.ವಿ ಪ್ರಸನ್ನ, ರಮೇಶ್, ಮಹಾಂತೇಶ್ ಒಡೆಯರತ್ತೂರು, ಪ್ರಭು ಎಚ್.ಪಿ, ಸುರೇಶ್ ದೊಡ್ಡೆತ್ತಿನಹಳ್ಳಿ, ಎಚ್.ಪಿ ವಿಜಯ್ ಸೇರಿದಂತೆ ನೌಕರರು ಇದ್ದರು.
