ಪ್ರಸಕ್ತ ಸಾಲಿನ ಜಿಲ್ಲೆಯ ಸಹಕಾರ ಸಂಘ ಹಾಗೂ ಸೌಹಾರ್ದ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಇವರು ಲೆಕ್ಕಪರಿಶೋಧನೆಗೆ ಲೆಕ್ಕಪರಿಶೋಧಕರ ನೇಮಕಾತಿ ಮಾಹಿತಿಯನ್ನು ನೇಮಕ ಮಾಡಿಕೊಂಡ ಬಗ್ಗೆ ವಾರ್ಷಿಕ ಮಹಾಸಭೆಯ ನಡಾವಳಿ ಪ್ರತಿಯೊಂದಿಗೆ ಲೆಕ್ಕ ಪರಿಶೋಧಕರಿಗೆ, ಲೆಕ್ಕಪರಿಶೋಧನಾ ಸಂಸ್ಥೆ ಮತ್ತು ಸಹಕಾರಿ ಲೆಕ್ಕಪರಿಶೋಧನಾ ನಿರ್ದೇಶಕರಿಗೆ ತಿಳಿಸಬೇಕು.
ಲೆಕ್ಕಪರಿಶೋಧಕರನ್ನು ಆಯ್ಕೆ ಮಾಡಿಕೊಂಡಿರುವ ಕುರಿತಂತೆ ಆಯ್ಕೆ ಪತ್ರವನ್ನು ಅಂಚೆ ಅಥವಾ ಇಮೇಲ್ ddcadavanagereaudit@gmail.com ಮೂಲಕ ಪ್ರಕಟಣೆಯ 3 ದಿನಗಳೊಳಗಾಗಿ ಉಪನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, #257/1-5, ಮೊದಲನೇ ಮಹಡಿ, ಜನತಾ ಬಜಾರ್ ಕಟ್ಟಡ, ಮೊದಲನೇ ಮುಖ್ಯ ರಸ್ತೆ ಪಿ.ಜೆ ಬಡಾವಣೆ ದಾವಣಗೆರೆ ಇಲ್ಲಿಗೆ ಮಾಹಿತಿಯನ್ನು ಸಲ್ಲಿಸುವುದು. ಇಲ್ಲವಾದಲ್ಲಿ ಇಲಾಖೆಯಿಂದಲೇ ಲೆಕ್ಕಪರಿಶೋಧಕರ ಆಯ್ಕೆ ಮಾಡಲಾಗುವುದು ಎಂದು ಜಿಲ್ಲೆಯ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪ ನಿರ್ದೇಶಕರಾದ ಮಹೇಶ್ವರಪ್ಪ.ಕೆ ತಿಳಿಸಿದ್ದಾರೆ.
