ಈ ತಿಂಗಳ 27 ರಂದು ಜಿಲ್ಲೆಯಲ್ಲಿ ನಿಧಿ ಆಪ್ಕೆ ನಿಕಾಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಯ ಅಗತ್ಯಗಳನ್ನು ಪೂರೈಸುವ ಇಪಿಎಫ್‌ಒ (ನೌಕರರ ಭವಿಷ್ಯ ನಿಧಿ ಸಂಸ್ಥೆ), ಜಿಲ್ಲೆಗಳಲ್ಲಿ ಹೆಜ್ಜೆ ಗುರುತು ಮತ್ತು ಉಪಸ್ಥಿತಿಯನ್ನು ಹೆಚ್ಚಿಸುವ ಉದ್ದೇಶದಿಂದ ಮತ್ತು ಕಾರ್ಮಿಕರಿಗೆ ಲಭ್ಯವಿರುವ ವಿವಿಧ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಒಗ್ಗೂಡಿಸುವ ಮಾಹಿತಿ ವಿನಿಮಯ, ಕುಂದು ಕೊರತೆ ನಿವಾರಣಾ ವೇದಿಕೆಯಾಗಿ ನಿಧಿ ಆಪ್ಕೆ ನಿಕಾಟ್ 2.0 ಕಾರ್ಯಕ್ರಮ ಕಾರ್ಯನಿರ್ವಹಿಸಲಿದೆ.
ಫೆಬ್ರವರಿ 27 ರಂದು ನಗರದ ಎಂ.ಸಿ.ಸಿ.ಬಿ ಬ್ಲಾಕ್, ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪ ಹಿಂಭಾಗದ ಚಿರಾಗ್ ಮೆಡಿಕೇರ್ ಸಲ್ಯೂಷನ್ ಪ್ರವ್ಹೇಟ್ ಲಿಮಿಟೆಡ್‌ನಲ್ಲಿ ಕಾರ್ಯಕ್ರಮವನ್ನು ನಡೆಸಲಾಗುವುದು ಇಪಿಎಫ್‌ಒ ಮತ್ತು ಇಎಸ್‌ಐಸಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಕಮೀಷನರ್ ತಿಳಿಸಿದ್ದಾರೆ.
