ನ್ಯಾಮತಿ: ಸಮಾಜದ ಶಾಂತಿಗೆ ಭಂಗ ತರುವ ಯಾವುದೇ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಪೆÇಲೀಸರ ಗಮನಕ್ಕೆ ತಂದರೆ, ಇಲಾಖೆಯು ಕಾನೂನು ಕ್ರಮ
ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಡಿವೈಎಸ್‍ಪಿ ಸ್ಯಾಮ್ ವರ್ಗೀಸ್ ಹೇಳಿದರು. ತಾಲೂಕಿನ ಮಾದನಬಾವಿ ಗ್ರಾಮದಲ್ಲಿ ಮಂಗಳವಾರ ಪೆÇಲೀಸ್ ಇಲಾಖೆ ವತಿಯಿಂದ ಅಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳು ಹೆಚ್ಚುತ್ತಿದ್ದು, ಕರೆಮಾಡಿ ಪೆÇಲೀಸ್ ಅಧಿಕಾರಿಗಳೆಂದು ಬೆದರಿಸುವ ಪ್ರಕರಣಗಳು ಬೆಳಕಿಗೆ ಬಂದಿದೆ. ಸಾರ್ವಜನಿಕರು ಹೆದರದೆ ಪೆÇಲೀಸ್ ಇಲಾಖೆಗೆ ಮಾಹಿತಿ ನೀಡಿ ಹಾಗೂ ಹಣ ವಂಚನೆ ನಡೆದಲ್ಲಿ ಕೂಡಲೇ 1930ಗೆ ಕರೆ ಮಾಡಿ ಎಂದು ತಿಳಿಸಿದರು. ಸಭೆಯಲ್ಲಿ ನ್ಯಾಮತಿ ಪಿಐ ಎನ್.ಎಸ್. ರವಿ, ಕೆಂಚಪ್ಪ, ರೇಣುಕಪ್ಪ, ಕಾಡಪ್ಪ, ದೇವರಾಜ್, ಸಿದ್ದೇಶ್, ಕುಮಾರ್ ಇತರರಿದ್ದರು.
