ಹೊನ್ನಾಳಿ ಫೆ: 25 ತಾಲೂಕಿನ ಬೆನಕನಹಳ್ಳಿ ಗ್ರಾಮ ಪಂಚಾಯಿತಿಗೆ ಇಂದು ಅಧ್ಯಕ್ಷರ ಗಾದೆಗೆ ಚುನಾವಣೆ ನಡೆಯಿತು. ಈ ಹಿಂದೆ ಅಧ್ಯಕ್ಷರಾಗಿದ್ದ ಶ್ರೀಮತಿ ಕೆ ವಸಂತರವರ ಅಧಿಕಾರದ ಅವಧಿ ಮುಗಿದು ರಾಜೀನಾಮೆಯಿಂದ ತೆರುವಾದ ಸ್ಥಾನಕ್ಕೆ ಅಧ್ಯಕ್ಷರ ಗಾದೆಗೆ ಶ್ರೀಮತಿ ಪುಷ್ಪಾಬಾಯಿ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಅರ್ಜಿಯನ್ನು ಸಲ್ಲಿಸಿದ್ದರು. ಬೇರೆ ಯಾವ ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷರ ಗಾದೆಗೆ ಅರ್ಜಿ ಸಲ್ಲಿಸಿದೆ ಇರುವ ಹಿನ್ನೆಲೆಯಲ್ಲಿ ಶ್ರೀಮತಿ ಪುಷ್ಪಾ ಬಾಯಿಯವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾ ಅಧಿಕಾರಿ ಮತ್ತು ಸಿಡಿಪಿಓ ಜ್ಯೋತಿಯವರು ಘೋಷಣೆ ಮಾಡಿದರು. ನೂತನ ಅಧ್ಯಕ್ಷರಿಗೆ ಸರ್ವ ಗ್ರಾಮ ಪಂಚಾಯಿತಿ ಸದಸ್ಯರುಗಳಿಂದ ಅಭಿನಂದನೆ ಸಲ್ಲಿಸಲಾಯಿತು.

ಜಿಲ್ಲಾ ಡಿಸಿಸಿ ಬ್ಯಾಂಕಿನ ನಿರ್ದೇಶಕ ಡಿಎಸ್ ಸುರೇಂದ್ರ ರವರು ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಚೆನ್ನೇಶ ಸಿ, ಸದಸ್ಯರುಗಳಾದ ರೇಷ್ಮಾ ಎ,ಕೆ, ಭಾಗಮ್ಮ ಕೆ, ಎ ಜಿ ಮಹೇಂದ್ರ ಕುಮಾರ್, ಎ ಕೆ ಗದಿಗೇಶ್, ಸುಧಾ, ದೀಪಾ ಡಿ,ಎಸ್, ರವಿಕುಮಾರ್ ಹೆಚ್ ಜಿ, ಹಾಲೇಶ್ ಎಚ್ ಪಿ, ಉಷಾ ಟಿವಿ, ಶಿವಕುಮಾರ್ ಸಿ, ಕಾವ್ಯ ಪಿ, ಮಂಜುನಾಥ ಪಿ, ಪಿಡಿಓ ರವಿಕುಮಾರ್, ಕಾರ್ಯದರ್ಶಿ ರಮೇಶ್ ನಾಯ್ಕ, ವಿಶ್ವನಾಥ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಮತ್ತು ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.