ನ್ಯಾಮತಿ: ತಾಲೂಕು ,ಸೂರಗೊಂಡನಕೊಪ್ಪದಲ್ಲಿ ದಿ 26-2-2025 ಬುದುವಾರ ರಂದು ಸಂಜೆ ಶ್ರೀ ಮಾತೆ ಮರಿಯಮ್ಮ ಯಾಡಿ ಮತ್ತು ಭಗವಾನ್ ಸಂತ ಸೇವಾಲಾಲರ ಭಾಯಾಗಡ್ ಶ್ರೀ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಮಹೋತ್ಸವನ್ನು ಸಾವಿರಾರು ಭಕ್ತರ ಭಾಗವಹಿಸುವುದರೊಂದಿಗೆ ವಿಶೇಷ ಪೂಜೆಯೊಂದಿಗೆ,ಮಹಾಭೋಗನೆರೆವೇರಿಸುವ ಮೂಲಕ ಸಂತ ಸೇವಾಲಾಲರ ಮತ್ತು ಶಿವನ ಕೃಪೆಗೆ ಪಾತ್ರರಾದರು.
ಬಂದಂತ ಭಕ್ತಾದಿಗಳಿಗೆ,ಪ್ರಸಾದ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು. ನಾಡಿನ ಉದ್ದಗಲಗಳಿಂದ ಆಗಮಿಸಿದ್ದ ಭಗವಾನ್ ರ ಭಕ್ತರು ಪೂಜಾ ಕಂಕೈಕಾರ್ಯದಲ್ಲಿ ಪಾಲ್ಗೊಂಡು ಹರ,ಹರ,ಶಂಕರ ಮತ್ತು ಸೇವಾಲಾಲರ ಕುರಿತು ಭಜನೆ,ಭಕ್ತಿ ಸಂಗೀತ ಕುಣಿತಗಳ ಮೂಲಕ ಭಕ್ತಿಗೆ ಪಾತ್ರರಾದರು.
ಸಂದರ್ಭದಲ್ಲಿ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಉಪಾಧ್ಯಕ್ಷರು ಹಾಗೂ ಮಠ್ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ.ಎನ್.ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್ ಕುಮಾರ್,ಖಜಾಂಚಿ ಕೆ.ಟಿ.ನಾಗರಾಜ್ ಇವರುಗಳು ಭೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹಾಶಿವರಾತ್ರಿ ಮಹೋತ್ಸವಕ್ಕೆ ಸಂತ ಸೇವಾಲಾಲ್ ಜನ್ಮ ಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರು ಹಾಗೂ ವಿಧಾನ ಸಭೆಯ ಉಪಾಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ,ಧರ್ಮದರ್ಶಿ ಪರಿಷತ್ ಅಧ್ಯಕ್ಷರಾದ ಬಿ.ಹೀರಾನಾಯಕ್,ನಿರ್ದೇಶಕರಾದ ರಾಘವೇಂದ್ರ ನಾಯಕ್,ತಾಂಡ ನಿಗಮದ ಅಧ್ಯಕ್ಷರಾದ ಎನ್.ಜಯದೇವ ನಾಯ್ಕ,ಭೋಜ್ಯಾನಾಯಕ್,ಉಪಸಮಿತಿ ಅಧ್ಯಕ್ಷರಾದ ನಾನ್ಯಾನಾಯಕ್,ಡಿ.ಥಾವರ್ಯನಾಯಕ್,ಸದಸ್ಯರಾದ ರೇಣುಕಾನಾಯಕ್,
ಮಹಾಮಠ ಆಡಳಿತಾಧಿಕಾರಿಗಳಾದ ಸೇವ್ಯಾನಾಯಕ್ ,ಹರೀಶ್ ನಾಯ್ಕ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಮಹಾಶಿವರಾತ್ರಿಯ ಶುಭಾಶಯವನ್ನು ಕೋರಿದ್ದಾರೆ.
