ನ್ಯಾಮತಿ:ತಾಲ್ಲೂಕಿನ ಗೋವಿನಕೋವಿ ಹಾಲಸ್ವಾಮಿ ಮ್ಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಹಾಲಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ನೂತನ ಶ್ರೀಗಳವರ ಪಟ್ಟಾಧಿಕಾರದ ಪ್ರಥಮ ವರ್ಧಂತ್ಯುತ್ಸವ ಹಾಗೂ ಪ್ರಥಮ ಮುಳ್ಳು ಗದ್ದಿಗೆ ಉತ್ಸವ ಫೆ. 27 ಮತ್ತು 28ರಂದು ನಡೆಯಲಿದೆ.
ಇಲ್ಲಿಯ ಎಪಿಎಂಸಿ ತರಕಾರಿ ವರ್ತಕರು ನಾಡಿನಲ್ಲಿ ಎಲ್ಲೇ ನಡೆಯುವ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಬೇಡಿಕೆ ಬಂದರೆ ವರ್ತಕರು, ರೈತರು ತಮ್ಮ ವಿವಿಧ ಬೆಳೆದ ತರಕಾರಿಗಳನ್ನು ಮಿನಿ ಲಾರಿಗಳಲ್ಲಿ ಉಚಿತವಾಗಿ ತುಂಬಿ ಕಳುಹಿಸುವ ಮೂಲಕ ಧಾರ್ಮಿಕ ಆಚರಣೆಗೆ ಪ್ರೋತ್ಸಾಹ ನೀಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆ ಪಡೆದಿದೆ.
ಬುಧವಾರ ಗೋವಿನಕೋವಿ ಹಾಲಸ್ವಾಮಿ ಮ ಠದ ಧಾರ್ಮಿಕ ಕಾರ್ಯಕ್ರಮಕ್ಕೆ ವಿವಿಧ ರೀತಿಯ ತರಕಾರಿಗಳನ್ನು ಸಂಗ್ರಹಿಸಿ ಒಂದು ಟ್ರ್ಯಾಕ್ಟರ್ ಭರ್ತಿ ಮಾಡಿ ಕಳುಹಿಸುವ ಮೂಲಕ ತಮ್ಮ ಭಕ್ತಿಯನ್ನು ಮರೆದರು. ಈ ಸಂದರ್ಭದಲ್ಲಿ ವಿವಿಧ ತರಕಾರಿ ಮಂಡಿಯ ವರ್ತಕರು, ರೈತರು, ಖರೀದಿದಾರರು ಹಾಗೂ ಹಮಾಲರು ಸಹಕರಿಸಿದ್ದು. ತರಕಾರಿ ಸ್ವೀಕರಿಸಿದ ಹಾಲಸ್ವಾಮಿ ಮಠದ ಸದ್ಗುರು ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಅವರು ಶುಭ ಹಾರೈಸಿದರು.
