ಹೊನ್ನಾಳಿ: ಫೆ. 28 ತಾಲೂಕಿನ ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಬೀರಗೊಂಡನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಬಸ್ ತಂಗುದಾಣ ಮತ್ತು ಡಿಜಿಟಲ್ ಗ್ರಂಥಾಲಯ ಅರಿವು ಕೇಂದ್ರದ ನೂತನ ಕಟ್ಟಡವನ್ನ ಹೊನ್ನಾಳಿ ತಾಲೂಕಿನ ಶಾಸಕರಾದ ಡಿಜಿ ಶಾಂತನಗೌಡ್ರರವರ ಅನುಪಸ್ಥಿತಿಯಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪಿಡಿಒ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.


ಇದೇ ಗ್ರಾಮದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀರಗೊಂಡನಹಳ್ಳಿ ನೂತನ ಕಟ್ಟಡವನ್ನು ಹೊನ್ನಾಳಿ ಜಿಲ್ಲಾ ಪಂಚಾಯಿತಿ ಎಇಇ ಮೋತಿಲಾಲ್ ನಾಯ್ಕ ಉದ್ಘಾಟಿಸಿದರು.


ಇದೇ ಗ್ರಾಮದಲ್ಲಿ ಬರುವ ಅಂಗನವಾಡಿ ಕೇಂದ್ರ 1 ನೂತನ ಕಟ್ಟಡವನ್ನು ಹೊನ್ನಾಳಿ ತಾಲೂಕಿನ ಸಿಡಿಪಿಓ ಜ್ಯೋತಿಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಲೋಹಿತ್, ಉಪಾಧ್ಯಕ್ಷ ಪಾರ್ವತಮ್ಮ, ಸದಸ್ಯರುಗಳಾದ ಕವಿತಾ ರಮೇಶ್, ಶ್ವೇತಾ ಬಸವರಾಜ್, ಕವಿತಾ ಮಂಜಪ್ಪ

ಮಹೇಂದ್ರ ಭಂಡಾರಿ, ಶೋಭಾ ಹಾಲಪ್ಪ, ಪಿಡಿಒ ಮಂಜುಳಾ, ಕಾರ್ಯದರ್ಶಿ ರಾಜಪ್ಪ ಗುತ್ತಿಗೆದಾರ ರಮೇಶ್ ಬಿ ವೈ, ಪಂಚಾಯಿತಿ ಸಿಬ್ಬಂದಿಗಳು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed