ದಾವಣಗೆರೆ ಮಾ.03 – ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೇಯುತ್ತಿದ್ದು ಮಾ.3 ರಂದು ನಡೆದ ವ್ಯವಹಾರ ಅಧ್ಯಯನ, ಗಣಿತ ಹಾಗೂ ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ ವಿಷಯದ ಪರೀಕ್ಷೆಗಳಿಗೆ ಹಾಜರಾದ ಹಾಗೂ ಗೈರು ಹಾಜರಾದ ವಿದ್ಯಾರ್ಥಿಗಳ ವಿವರ.
ವ್ಯವಹಾರ ಅಧ್ಯಯನ ವಿಷಯಕ್ಕೆ ಒಟ್ಟು 4112 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು ಇದರಲ್ಲಿ 3950 ವಿದ್ಯಾರ್ಥಿಗಳು ಹಾಜರಾಗಿ 162 ಗೈರು ಹಾಜರಾಗಿರುತ್ತಾರೆ.
ಗಣಿತ ವಿಷಯದ ಪರೀಕ್ಷೆಗೆ ಒಟ್ಟು 11656 ವಿದ್ಯಾರ್ಥಿಗಳು ನೊಂದಾಯಿಸಿದ್ದು,11549 ವಿದ್ಯಾರ್ಥಿಗಳು ಹಾಜರಾಗಿ, 107 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆ.
ಶಿಕ್ಷಣ ಶಾಸ್ತ್ರ ವಿಷಯವನ್ನು 680 ವಿದ್ಯಾರ್ಥಿಗಳು ತೆಗೆದುಕೊಂಡಿದ್ದು, ಇದರಲ್ಲಿ 426 ವಿದ್ಯಾರ್ಥಿಗಳು ಹಾಜರಾಗಿ, 54 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆ.
ತರ್ಕಶಾಸ್ತ್ರವನ್ನು 46 ವಿದ್ಯಾರ್ಥಿಗಳು ತೆಗೆದುಕೊಂಡಿದ್ದು, ಇವರಲ್ಲಿ 42 ವಿದ್ಯಾರ್ಥಿಗಳು ಹಾಜರಾಗಿ, 4 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕರಿಸಿದ್ದಪ್ಪ ತಿಳಿಸಿದ್ದಾರೆ.
