ನ್ಯಾಮತಿ ತಾಲೂಕು ಬೆಳಗುತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ ಇಂದು ಚುನಾವಣೆ ನಡೆಯಿತು.
ಆಡಳಿತ ಮಂಡಳಿಯ ಅಧ್ಯಕ್ಷರ ಗಾದೆಗೆ ಡಿ ಜಗದೀಶಪ್ಪ ಉಪಾಧ್ಯಕ್ಷರ ಗಾದೆಗೆ ಜಿ ಪಾಲಾಕ್ಷಪ್ಪ ಇವರುಗಳು ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ ನಿರ್ದೇಶಕರುಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷರಗಾದೆಗೆ ನಾಮಪತ್ರ ಅರ್ಜಿ ಸಲ್ಲಿಸದೇ ಇರುವ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಡಿ ಜಗದೀಶ್ ಮತ್ತು ಉಪಾಧ್ಯಕ್ಷರಾಗಿ ಜಿ ಪಾಲಾಕ್ಷಪ್ಪ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಹೊನ್ನಾಳಿ ಸಿಡಿಓ ಮತ್ತು ಚುನಾವಣೆ ಅಧಿಕಾರಿಗಳಾದ ನವೀನ್ ರವರು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಜಿಟಿ ತೀರ್ಥಲಿಂಗಪ್ಪ ಗಾಡಿ, ಪಿ ಎಚ್ ಉಮೇಶ್, ಜಿ ಪಾಲಾಕ್ಷಪ್ಪ ಆರ್ ತೀರ್ಥಲಿಂಗಪ್ಪ ನಾಗರಾಜಪ್ಪ ಎಂ ಕೆ. ಸುರೇಶ್ ಟಿ ಎಂ, ಎಸ್ ಪ್ರಕಾಶ್ ಒಡೆಯರ್, ರೇವಣಸಿದ್ದಪ್ಪ ಸಿಪೋಳ್, ಆಶಾರಾಣಿ ಡಿ ಬಿ ,ರೇಣುಕಮ್ಮ ಹಾಲೇಶಪ್ಪ ಎನ್, ಕಾರ್ಯದರ್ಶಿ ತೀರ್ಥಪ್ಪ ಎ,ಕೆ, ಪಿಗ್ಮಿ ಏಜೆಂಟ್ ಬಸವರಾಜ್ ಹೆಚ್ ಸಿ, ಸುತ್ತಮುತ್ತಲಿನ ಗ್ರಾಮಸ್ಥರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶೇರುದಾರರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.
