ಹೊನ್ನಾಳಿ,14: ಪಟ್ಟಣದ ಪುರಸಬೆಯ ಪುರಸಭಾ ಭವನದಲ್ಲಿ 2025-26ನೇ ಅಯವ್ಯಯ ಬಜಟ್ ಮಂಡನೆಯಾಗುವ ಮುನ್ನವೇ ಪುರಸಭೆ ಆಡಳಿತ ಮಂಡಳಿಯ ಸದಸ್ಯರು ಅಧ್ಯಕ್ಷ ಮೈಲಪ್ಪ ಅವರಿಗೆ ಕೆಲವು ಸದಸ್ಯರು ಏರುದ್ವನಿಯಲ್ಲಿ ಮಾತನಾಡುತ್ತಿದ್ದಂತೆ, ಸಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹೊಸಕೇರಿ ಸುರೇಶ್ ಅವರು ನಡುವೆ ಬಂದು ಎನೇ ವಿಷಯವಿದ್ದರೂ ಸಮಾದಾನ ಮತ್ತು ನಿಧಾನವಾಗಿ ಕೆಳಿ ಸಮಸ್ಯೆ ಬಗೆಹರಿಸಿಕೊಳ್ಳಿ ಎನ್ನತಿದ್ದಂತೆ ಕೆಲವು ಸದಸ್ಯರು ಏಕಾಎಕಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡತೊಡಗಿದ ಘಟನೆ ಶುಕ್ರವಾರ ಗಲಾಟೆ ಗದ್ದಲ ನಡೆಯಿತು.
ಹೊನ್ನಾಳಿ ಪುರಸಭೆಯ ವ್ಯಾಪ್ತಿಯಲ್ಲಿ ರಸ್ತೆ ಚರಂಡಿ ವಿದ್ಯುತ್ ದ್ವೀಪ ಸೇರಿದಂತೆ ಅನೇಕ ಸಮಸ್ಯೆಗಳಿವೆ ಜನರಿಂದ ಆಯ್ಕೆಯಾದ ಜನಪ್ರತಿನಿದಿಗಳೇ ತಮ್ಮ-ತಮ್ಮ ವಾರ್ಡಿನ ಅನೇಕ ಸಮಸ್ಯೆ ಮತ್ತು ನಾಗರಿಕರ ಸಮಸ್ಯೆ ಬಗೆಹರಿಸದೆ ಕೆಲವು ಸದಸ್ಯರು ಸ್ವಪ್ರತಿಷ್ಠೆಯಿಂದ ನಾ ಮೇಲು ನಾನು ಹೇಳಿದಂತೆ ನಡೆಯಬೇಕು ಎಂದು ಪರಿಶಿಷ್ಠ ಜಾತಿ ಸದಸ್ಯ ಅಧ್ಯಕ್ಷ ಎ.ಕೆ.ಮೈಲಪ್ಪನ ಮೇಲೆ ವಿನಃ ಕಾರಣ ಏರುದ್ವನಿಯಲ್ಲಿ ಏಕವಚನದಲ್ಲಿ ಗಾಲಟೆ ಗದ್ದಲ ಮಾಡತೋಡಗಿದರು. ಕೆಲವು ಸದಸ್ಯರು ಅಧ್ಯಕ್ಷ ಮೈಲಪ್ಪನ ಪರವಾಗಿ ಸಂವಿಧಾನದಡಿಯಲ್ಲಿ ಸಮಾನತೆ ಎಲ್ಲಿದೆ ಎಂದು ಇವರೇ ಮಾತನಾಡಬೆಕೇ ಎಂದು ಅಧ್ಯಕ್ಷರ ಟೆಬಲ್ ಬಳಿ ಬಂದು ಕುಳಿತು ಬಜಟ್ ಮಂಡನೆ ಸಭೆ ಸರಿಯಾಗಿ ನಡೆಸುವವರೆಗೆ ಸಭೆಯಲ್ಲಿ ಭಾಗವಹಿಸುವುದಿಲ್ಲ ಸಭೆಗೆ ಅಗೌರವ ತಂದಿದ್ದಾರೆ ಗಲಾಟೆ ಮಾಡಿದ ಸದಸ್ಯರು ಕ್ಷೇಮ ಯಾಚಿಸಬೇಕು ಎಂದು ಸಭೆಯಿಂದ ಹೋರಹೋದ ಘಟನೆ ನಡೆಯಿತು.
2025-26ನೇ ಅಯವ್ಯಯ ಬಜಟ್ ಸಭೆ ಯಶಸ್ವಿಗೆ ಅಧ್ಯಕ್ಷ ಮೈಲಪ್ಪ ಅವರು ಮಧ್ಯಸ್ಥಿಕೆವಹಿಸಿ ಎರಡು ಕಡೆ ಸದಸ್ಯರಿಗೆ ಸಮಾದಾನ ಮಾಡಿ ಬಜಟ್ ಕಾರ್ಯಕ್ರಮ ನಡೆಯಲು ಅನುವು ಮಾಡಿಕೊಡಿ ನಿಮ್ಮ-ನಿಮ್ಮ ಸಮಸ್ಯೆಗೆ ಮುಂದಿನ ದಿನಗಳಲ್ಲಿ ವಿಶೇಷ ಸಬೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೊರಹೋದ ಸದಸ್ಯರನ್ನ ಸಮಾದಾನ ಮಾಡಿ ಕರೆತರಲು ಯಶಸ್ವಿಯಾದರು. ಬಜಟ್ ಸಭೆ 15 ರಿಂದ 20 ನಿಮಿಷದ ತಡವಾದರೂ ನಂತರ ಎಲ್ಲಾ ಸದಸ್ಯರು ಪಕ್ಷತೀತವಾಗಿ ಯಸಸ್ವಿ ಬಜಟ್‍ಗೆ ಅಧ್ಯಕ್ಷ ಮೈಲಪ್ಪನವರಿಗೆ ಎಲ್ಲಾ ಸದಸ್ಯರು ನಾಮ ನಿದೇರ್ಶನ ಸದಸ್ಯರು ಕೈಜೋಡಿಸಿದರು.

Leave a Reply

Your email address will not be published. Required fields are marked *

You missed