ಹೊನ್ನಾಳಿ,14: 2025-26 ನೇ ಸಾಲಿನ ಹೊನ್ನಾಳಿ ಪುರಸಭೆಯು 5,870 ಲಕ್ಷ ಮೊತ್ತದ ಉಳಿತಾಯ ಬಜೆಟ್‍ನ್ನು ಪುರಸಭಾಧ್ಯಕ್ಷ ಮೈಲಪ್ಪ ಮಂಡಿಸಿದರು.ಪುರಸಭಾ ಸಭಾಂಗಣದಲ್ಲಿ 25-26 ನೇಸಾಲಿನ ಎಲ್ಲಾ ಮೂಲಗಳಿಂದ ಪ್ರಸ್ತುತ ಸಾಲಿನ ಆರಂಭಿಕ ಶಿಲ್ಕು ಸೇರಿ 15.28 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದ್ದು ಹಾಗೂ 14.70 ಕೋಟಿ ವೆಚ್ಚ ನಿರಿಕ್ಷಿಸಿಸಲಾಗಿದ್ದು.58.70 ಲಕ್ಷ ಉಳಿತಾಯ ನಿರೀಕ್ಷೆ ಹೊಂದಲಾಗಿದೆ ಎಂದು ಪುರಸಭಾಧ್ಯಕ್ಷ ಮೈಲಪ್ಪ ವಿವರಿಸಿದರು.
ಕಟ್ಟಡದ ಆಸ್ತಿ ತೆರಿಗೆ ಮೂಲಕ 1 ಕೋಟಿ,ಉದ್ದಿಮೆ ಪರವಾನಿಗೆ ಮೂಲಕ 8 ಲಕ್ಷ,ಮಳಿಗೆಗಳ ಬಾಡಿಗೆಯಿಂದ 95 ಲಕ್ಷ, ಕಟ್ಟಡ ಪರವಾನಿಗೆಯಿಂದ 10 ಲಕ್ಷ,ನಿವೇಶನ ಅಭಿವೃದ್ಧಿ ಶುಲ್ಕದಿಂದ 35 ಲಕ್ಷ, ಸೇರಿದಂತೆ ವಿವಿಧ ಬಾಬ್ತುಗಳಿಂದ ಒಟ್ಟು 15.28 ಕೋಟಿ ಲಾಭ ನಿರೀಕ್ಷೆ ಮಾಡಲಾಗಿದೆ.
ರಸ್ತೆ ಚರಂಡಿಗಳ ಕಾಮಗಾರಿಗೆ 15 ನೇ ಹಣಕಾಸು ಯೋಜನೆಯಿಂದ 1 ಕೋಟಿ,ಎಸ್.ಎಫ್.ಸಿ ಮುಕ್ತ ನಿಧಿ ಅನುದಾನದಿಂದ 1 ಕೋಟಿ, ಕಚೇರಿ ಗಣಕಯಂತ್ರ ಹಾಗೂ ಇತರೆ ಉಪಕರಣಗಳ ಖರೀಧೀಗಾಗಿ 15 ಲಕ್ಷ, ಹೈಮಾಸ್ಡ್ ವಿದ್ಯುತ್ ದೀಪಾ,ಸೋಲಾರ್.ಎಲ್‍ಇಡಿ ಮತ್ತು ಬೀದಿ ದೀಪಗಳ ಖರೀಧೀಗಾಗಿ 48 ಲಕ್ಷ,ಕಟ್ಟಡ ದುರಸ್ತಿ ಮತ್ತು ನಿರ್ವಹಣೆಗಾಗಿ 49 ಲಕ್ಷ ಹಾಗೂ ಹೊರಗುತ್ತಿಗೆ ನೌಕರರ ವೇತನಕ್ಕಾಗಿ 50 ಲಕ್ಷ ಸೇರಿದಂತೆ ಒಟ್ಟು 14.70 ಲಕ್ಷ ಖರ್ಚು ಮಡಲು ಮೀಸಲಿರಿಸಿದೆ ಎಂದರು.
ಹೊನ್ನಾಳಿ ಪಟ್ಟಣದ ಹಾಗೂ ಇತೀಚಿಗೆ ಹೊಸದಾಗಿಪುರಸಭೆಗೆ ಸೇರ್ಪಡೆಯಾಗಿರುವ ದೇವನಾಯಕನಹಳ್ಳಿ ಹಾಗೂ ಹಿರೇಮಠ ಗ್ರಾಮಗಳಲ್ಲೂ ಶಾಸಕ ಡಿ.ಜಿ.ಶಾಂತನಗೌಡ ಅವರ ನೇತೃತ್ವದಲ್ಲಿ ಅಭಿವೃದ್ಧಿ ಮಾಡೋಣ,ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಸಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹೊಸಕೇರಿ ಸುರೇಶ್,ಪುರಸಭಾ ಸದಸ್ಯರಾದ ಎಂ.ಸುರೇಶ್,ಮಾಜಿ ಅಧ್ಯಕ್ಷರಾದ ಕೆ.ವಿ.ಶ್ರೀಧರ್,ಬಾಬು ಹೋಬಳದಾರ್,ರಂಗನಾಥ್,ಸುಮಾ ಮಂಜುನಾಥ್, ಸವಿತಾ ಮಹೇಶ್ ಹುಡೇದ್,ರಂಜಿತಾ ಚನ್ನಪ್ಪ,ಬಾವಿಮನೆ ರಾಜಣ್ಣ,ಧರ್ಮಪ್ಪ,ರಾಜೇಂದ್ರ,ತನ್ವಿರ್,ಪದ್ಮಪ್ರಶಾಂತ್,ಉಷಾ ಗಿರೀಶ್,ಅನುಶಂಕರ್,ಸುಮಾ ಸತೀಶ್,ನಾಮಿನಿ ಸದಸ್ಯರಾದ ರೇವಣಸಿದ್ದಪ್ಪ ಮೂಲಿಮನೆ,ರವಿ,ಮಾದಪ್ಪ,ಚಂದ್ರಪ್ಪ,ಮುಖ್ಯಾಧಿಕಾರಿ ಲೀಲಾವತಿ,ಇಂನಿಜಿಯರ್ ದೇವರಾಜ್,ಆರೋಗ್ಯ ನಿರೀಕ್ಷಕ ಪರಮೇಶ್‍ನಾಯ್ಕ್ ಹಾಗೂ ಇತರರು ಇದ್ದರು.
