ನ್ಯಾಮತಿ:ಗಡೆಕಟ್ಟೆ ಗ್ರಾಮದಲ್ಲಿ ಮಾರ್ಚ್ ಮತ್ತು 19ರಂದು ನಡೆಯಲಿರುವ ಮಾರಿಕಾಂಬಾದೇವಿ ಜಾತ್ರೆಯನ್ನು ಶಾಂತಿ ಮತ್ತು ಸೌಹಾರ್ಧಯುತವಾಗಿ ಆಚರಿಸುವಂತೆ ನ್ಯಾಮತಿ ಪೊಲೀಸ್ ಎಎಸ್‍ಐ ಮಲ್ಲೇಶಪ್ಪ ತಿಳಿಸಿದರು.
ತಾಲ್ಲೂಕಿನ ಗಡೆಕಟ್ಟೆ ಗ್ರಾಮದಲ್ಲಿ ಎರಡು ದಿನ ನಡೆಯಲಿರುವ ಮಾರಿಕಾಂಬಾ ಜಾತ್ರೆಗೆ ಸಂಬಂಧಿಸಿದಂತೆ ಶನಿವಾರ ಬಸವೇಶ್ವರ ದೇವಸ್ಥಾನದಲ್ಲಿ ದೇವಸ್ಥಾನ ಸಮಿತಿ ಮತ್ತು ಪೊಲೀಸ್ ಇಲಾಖೆ ಸಹಯೋಗದಲಿ ನಡೆದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮ ಚಿಕ್ಕದಾಗಿರುವ್ಯದರಿಂದ ಹೊರಗಡೆಯಿಂದ ಬರುವ ವಿವಿಧ ವಾಹನಗಳಿಗೆ ಗ್ರಾಮದ ಹೊರಭಾಗದ ಜಮೀನುಗಳಲ್ಲಿ ನಿಲುಗಡೆ ವ್ಯವಸ್ಥೆ ಮಾಡುವಂತೆ ಹಾಗೂ ಇಲಾಖೆ ವತಿಯಿಂದ ಬ್ಯಾರಿಕೇಡ್‍ಗಳನ್ನು ಒದಗಿಸುವುದಾಗಿ ಹಾಗೂ ಅಹಿತಕರ ಘಟನೆಗಳಿಗೆ ಗ್ರಾಮಸ್ಥರು ಆಸ್ಪದ ಕೊಡಬಾರದು ಪ್ರೀತಿ ವಿಶ್ವಾಸದಿಂದ ಹಬ್ಬ ಆಚರಿಸಿ ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಜಿ.ವಿ.ನಿರಂಜನ, ಉಪಾಧ್ಯಕ್ಷ ಡಿ.ಎ.ಹನುಮಂತಪ್ಪ, ಸದಸ್ಯರಾದ ಕೆ.ಜಿ.ಪರಮೇಶ, ಜೆ.ಕೆ.ಚಂದ್ರಪ್ಪ, ಎಂ.ಜಿ.ನಾಗರಾಜ, ಬಸವನಗೌಡ, ಜೆ.ಒ ಹನುಮಂತಪ್ಪ, ಬಸವರಾಜ, ವೀರಭದ್ರ, ಗಜೇಂದ್ರಪ್ಪ, ಎಂ.ಜಿ.ಚನ್ನವೀರಪ್ಪ, ಜಿ.ಎ.ರುದ್ರಪ್ಪ, ಜೆ.ಎ.ಮಹೇಶ್ವರಪ್ಪ, ಧ£ಂಜಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
