ನ್ಯಾಮತಿ:ದಾನಿಹಳ್ಳಿ ಜಿಲ್ಲೆಯಲ್ಲಿ ಕುಡಿಯುವ ನೀರು ಯೋಜನೆ ಯಶಸ್ವಿಯಾಗುವುದರ ಜೊತೆಗೆ ಗ್ರಾಮಗಳನ್ನು ಸ್ವಾವಲಂಭಿ ಗ್ರಾಮಗಳನ್ನಾಗಿ ಮಾಡುವಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದು ವಿಶ್ವಬ್ಯಾಂಕ್ ಟಾಸ್ಕ್ ಟೀಮ್ ಲೀಡರ್ ವ್ಮರಿಯಪ್ಪ ಕುಳ್ಯಪ್ಪ ಸಲಹೆ ನೀಡಿದರು.
ತಾಲ್ಲೂಕಿನ ಗಂಗನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾನಿಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲಜೀವನ್ ಮಿಷನ್ ಯೋಜನೆ ಮತ್ತು ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾರ್ಯಕ್ರಮದ ಅನುಷ್ಠಾನ ಮತ್ತು ನಿರಂತರ ನೀರು ಸರಬರಾಜು ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಗುರುವಾರ ಗ್ರಾಮಕ್ಕ ಭೇಟಿ ನೀಡಿ ಅವರು ಮಾತನಾಡಿದರು.
ನೀರು ಸರಬರಾಜು ನಿರಂತರವಾಗಿ ಹರಿಯುತ್ತಿದ್ದರೆ ನೀರು ಕಲುಷಿತವಾಗುವುದಿಲ್ಲ, ರೋಗರುಜಿನಿಗಳಿಂದ ಮುಕ್ತವಾಗಿರಲು ಸಾಧ್ಯವಾಗುತ್ತದೆ. ಗ್ರಾಮಸ್ಥರ ಸಹಕಾರ ಮತ್ತು ಅಧಿಕಾರಿಗಳ ಶ್ರಮದಿಂದ ಜಿಲ್ಲೆಯ ದಾನಿಹಳ್ಳಿ ಗ್ರಾಮದಲ್ಲಿ ಯೋಜನೆ ಯಶಸ್ವಿಯಾಗಿದೆ. ಇದರ ಜೊತೆಗೆ ಗ್ರಾಮಗಳನ್ನು ಸಹಾ ಸ್ವಾವಲಂಬಿ ಗ್ರಾಮಗಳನ್ನಾಗಿ ಮಾಡಬೇಕು ಎಂದರು.
ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆರು ತಾಲ್ಲೂಕುಗಳ ಕಾರ್ಯ ನಿರ್ವಾಹಕಾಧಿಕಾರಿಗಳು, ಎಇಇಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು 15 ದಿನಗಳಲ್ಲಿ ಜಿಲ್ಲೆಯ 100 ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಲ್ಲಿ 24 ತಾಸು ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಸ್ರಚಿಸಿದರು.
ನಿರಂತರ ನೀರು ಯೋಜನೆಯಲ್ಲಿ ಯಶಸ್ವಿಯಾಗಿರುವ ಗ್ರಾಮಗಳ ಜನತೆ ಅತಿಥಿಗಳಿಗೆ ಶುದ್ದೀಕರಿಸಿದ ಬಾಟಲ್ ನೀರನ್ನು ಕೊಡದೆ ನಲ್ಲಿಯ ನೀರನ್ನು ಜಗ್ಗುವಿನಲ್ಲಿ ಹಾಕಿ ಕೊಡಿ ಮತ್ತು ನೀವು ಸಹ ಅದನ್ನೇ ಬಳಸಿ ಎಂದು ಸಲಹೆ ನೀಡಿದರು.
ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುರೇಶ ಬಿ ಇಟ್ನಾಳ್ ಮಾತನಾಡಿ, ವಿಶ್ವಬ್ಯಾಂಕ್ ನೆರವಿನಿಂದ ಎರಡು ವರ್ಷಗಳ ತಮ್ಮ ಅಧಿಕಾರ ಅವಧಿಯಲ್ಲಿ ದಾನಿಹಳ್ಳಿ ಗ್ರಾಮಕ್ಕೆ ನಿರಂತರವಾಗಿ ನೀರು ಸರಬರಾಜು ಮಾಡುವಲ್ಲಿ ಯಶಸ್ವಿಯಾಗಿರುವುದು ಹೆವ್ಮ್ಮೆಯ ವಿಷಯ. ಎಲ್ಲ ಗ್ರಾಮ ಪಂಚಾಯಿತಿಗಳಲ್ಲು ಗ್ರಾಮ ನೀರು ನೈರ್ಮಲ್ಯ ಇಲಾಖೆಯ ಪ್ರತ್ಯೇಕ ಖಾತೆಯನ್ನು ತೆರೆದು ಆನ್‍ಲೈನ್ ಬಿಲ್ಲಿಂಗ್ ವ್ಯವಸ್ಥೆ ಮಾಡಲಾಗುವುದು ಎಂದರು.
ಫೀಡ್ ಬ್ಯಾಂಕ್ ಸಂಸ್ಥೆ ಮುಖ್ಯಸ್ಥ ದೆಹಲಿಯ ಅಜಯಸಿನ್ನಾ ಮಾತನಾಡಿ, ದಾವಣಗೆರೆ ಜಿಲ್ಲೆಯ ಜನತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ ಬಿ ಇಟ್ನಾಳ್ ಅವರಂತಹ ಜನಪರ ಅಧಿಕಾರಿಗಳನ್ನು ಪಡೆದಿರುವುದು ಭಾಗ್ಯ ಎಂದರು.
ಗಂಗನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ P್ಪರಿಯಮ್ಮ ಅಧ್ಯಕ್ಷತೆ ವಹಿಸಿದ್ದರು. ನ್ಯಾಮತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಎಚ್.ವಿ. ಹೊನ್ನಾಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಆರ್.ಪ್ರಕಾಶ, ಜಿಲ್ಲಾ ವಾರ್ತಾಧಿಕಾರಿ ಧನಂಜಯ, ಎಇಇ ಸೋಮ್ಲಾನಾಯ್ಕ, ಪಿಡಿಒಗಳಾದ ಸುರೇಶ, ಸತೀಶಕುಮಾರ, ಎಂ.ಜಯಪ್ಪ, ಎಂ.ಜೆ.ಆಶಾ ಹಾಗೂ ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಉಪಸ್ಥಿತರಿದ್ದರು.
