ನ್ಯಾಮತಿ:ಮಾದನಬಾವಿ ದಾಸಶ್ರೇಷ್ಠ ಸಂತಕವಿ ವಿಶ್ವಮಾನವ ಕನಕದಾಸರು ರಚಿಸಿರುವ ಕೀರ್ತನೆಗಳು ಅತ್ಯಂತ ಶ್ರೇಷ್ಠಮಟ್ಟದಲ್ಲಿ ಇದೆ. ಅವುಗಳನ್ನು ಉಳಿಸಿ ರಕ್ಷಿಸುವ ಸಲುವಾಗಿ ಯುಗಾದಿ ಸಂಭ್ರಮ, ಜಾನಪದ ಯುವಜನಮೇಳ, ಹಾಲುಮತ ಸಂಸ್ಕøತಿ ಕನಕ ಕಲಾ ವೈಭವ ಕನಕನ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕøತ ಯೋಗಾಚಾರ್ಯ ಪತಂಜಲಿ ಜೆ. ನಾಗರಾಜ ತಿಳಿಸಿದರು
ತಾಲ್ಲೂಕಿನ ಮಾದನಬಾವಿ ಗ್ರಾಮದಲ್ಲಿ ಗುರುವಾರ ಗ್ರಾಮದ ಗಣ್ಯರೊಡಗೂಡಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಾರ್ಚ್ 31ರ ಸಂಜೆ ಗ್ರಾಮದ ರಂಗಮಂದಿರದಲ್ಲಿ ಕನಕದಾಸರ ಗೀತಗಾಯನ ನೃತ್ಯರೂಪಕ, ಹಾಲುಮತ ಕನಕಶ್ರೀ ಜಾನಪದ ಕಲಾ ಸೇವಾ ರತ್ನ ರಾಜ್ಯ ಪ್ರಶಸ್ತಿ, ಆಕಾಶವಾಣಿ ದೂರದರ್ಶನ ಕಲಾವಿದರಿಂದ ಗೀತಾಗಾಯನ, ಎಂ.ಪೂವಚಿiÀ್ಯು ಅವರಿಂದ ಕನಕದಾಸರ ಪಾತ್ರ, ಬೀರಪ್ಪನ ಪಾತ್ರದಲ್ಲಿ ಪತಂಜಲಿ ಜೆ.ನಾಗರಾಜ ಅವರಿಂದ ಬೀರಪ್ಪನ ಪಾತ್ರ ಮತ್ತು ಯೋಗ ಪ್ರದರ್ಶನ ನಡೆಯಲಿದೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮಾಜಿ ಸೈನಿಕ ಎಂ.ವಾಸಪ್ಪ ಮನವಿ ಮಾಡಿದರು.
ಬೀರಲಿಂಗೇಶ್ವರ,ಗವಿಸಿದ್ದೇಶ್ವರ, ವೀರಭದ್ರೇಶ್ವರ ಜಾನಪದ ಕಲಾ ಸ್ವಸಹಾಚಿiÀು ಸಂಘ, ರಂಗನಾಥ ಜಾನಪದ ಸಾಂಸ್ಕøತಿಕ ಕಲಾ ಸ್ವಸಹಾಯ ಸಂಘ ಮತ್ತು ಶಿವಮೊಗ್ಗ ಪತಂಜಲಿ ಯೋಗ ಘಟಕಗಳು ಮತ್ತು ಸಮಸ್ತ ಗ್ರಾಮಸ್ಥರು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ ಎಂದರು.
ಮುಖಂಡರಾದ ರಂಗನಾಥ, ಮಂಜುಳಾ, ಬಸವರಾಜಪ್ಪ, ಚಂದ್ರಮ್ಮ, ಇಂದ್ರಮ್ಮ, ದೊಡ್ಡಪ್ಪ, ಕುಬೇಂದ್ರಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed