ನ್ಯಾಮತಿ: ಗೋವಿನಕೋವಿ ತಾಯಿ ಮೊದಲ ಗುರು ಎಂಬಂತೆ ತಾಯಂದರು ತಮ್ಮ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ಶಿಕ್ಷಣದ ಜೊತೆಗೆ ಸಂಸ್ಕಾರವಂತರನ್ನಾಗಿ ರೂಪಿಸಿ ಎಂದು ಗೋವಿನಕೋವಿ ಹಾಲಸ್ವಾಮಿ ವ್ಮಠದ ಪೀಠಾಧ್ಯಕ್ಷರಾದ ಸದ್ಗುರು ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಗೋವಿನಕೋವಿ ಗ್ರಾಮದ ಹಾಲಸ್ವಾಮಿ ವ್ಮಠದಲ್ಲಿ ಶನಿವಾರ ಯುಗಾದಿ ಅಮಾವಾಸ್ಯೆ ಸಲುವಾಗಿ ನಡೆದ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುಖ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ ಎರಡನ್ನು ಸ್ವೀಕರಿಸಬೇಕು. ಮಕ್ಕಳಿಗೆ ಮೊಬೈಲ್ ಅಭ್ಯಾಸ ಮಾಡಿಸಬೇಡಿ, ಮಕ್ಕಳಲ್ಲಿ ಮೊಬೈಲ್ ಆಸಕ್ತಿ ಬೆಳೆಯಲು ತಾಯಂದಿರೂ ಕಾರಣವಾಗುತ್ತಾರೆ. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬ ನಾಣ್ನುಡಿಯಂತೆ ನಮ್ಮ ಆದಾಯದ ಸ್ವಲ್ಪ ಭಾಗವನ್ನು ದಾನ ಮಾಡುವ ಮೂಲಕ ಶ್ರೇಷ್ಠತೆಯನ್ನು ಸಾದಿಸüಬೇಕು ಎಂದರು.
ಹೊನ್ನಾಳಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಯೋಗೇಶ ಕೋರಿ, ನ್ಯಾಮತಿ ತಾಲ್ಲೂಕು ಪತ್ರಕರ್ತರ ಸಂಘದ ಸಂಚಾಲಕ ಸಿದ್ದಲಿಂಗಸ್ವಾಮಿ ಹೊಳೆವ್ಮಠ, ಸಾಸ್ವೇಹಳ್ಳಿ ಗಿರೀಶÀ ಎಂ ನಾಡಿಗ್, ರಾಂಪುರ ಎ.ಕೆ.ಹಾಲೇಶ, ಹೊನ್ನಾಳಿ ಮೃತ್ಯುಂಜಯ ಪಾಟೀಲ್, ನ್ಯಾಮತಿ ಡಿ.ಎಂ.ಹಾಲಾರಾಧ್ಯ, ಶಿಕ್ಷಕ ರೇಣುಕಸ್ವಾಮಿ, ಗ್ರಾಮದ ಮುಖಂಡ ಮಧು ಮಾತನಾಡಿದರು.
ಪತ್ರಕರ್ತರಾದ ಸದಾಶಿವಯ್ಯ ಹಿರೇವ್ಮಠ, ನ್ಯಾಮತಿ ತರಕಾರಿ ವರ್ತಕರಾದ ಕೆ.ಆರ್.ಗಂಗಾಧರ, ಎಸ್.ಎಂ.ಟಿ. ಶಿವು , ಹಾಲಸ್ವಾಮಿ ವ್ಮಠದ ಸೇವಾ ಸಮಿತಿಯ ಪದಾಧಿಕಾರಿಗಳು, ಸುತ್ತಮುತ್ತಲಿನ ಭಕ್ತರು ಉಪಸ್ಥಿತರಿದ್ದರು.
